Saturday, June 30, 2012

ಹೃದಯದ ಕರೆ....


                        
-------->>>>>>>>(ಪರಮಾತ್ಮ ಚಿತ್ರದ ಜಯಂತ್ ಕಾಯ್ಕಿಣಿಯವರ
"ಹೆಸರು ಪೂರ್ತಿ ಹೇಳದೆ..... ತುಟಿಯ ಕಚ್ಚೀಕೊಳ್ಳಲೇ...."
ಹಾಡಿನ   Tuneಗೆ "ಬದಲಾದ ಸಾಹಿತ್ಯದಲ್ಲಿ"....)




------------------------------------                          








-------->>>>>>>>(ಪರಮಾತ್ಮ ಚಿತ್ರದ ಜಯಂತ್ ಕಾಯ್ಕಿಣಿಯವರ
"ಹೆಸರು ಪೂರ್ತಿ ಹೇಳದೆ..... ತುಟಿಯ ಕಚ್ಚೀಕೊಳ್ಳಲೇ...."
ಹಾಡಿನ   Tuneಗೆ "ಬದಲಾದ ಸಾಹಿತ್ಯದಲ್ಲಿ"....)


------------------------------------
ಕನಸ ಬುತ್ತಿ ಬಾಡಲು...
ಕವಿತೆ ಕಥೆಯೇ ಆಗಲು...
ಮನಸು ಏಲ್ಲೋ ನೋಯಲು....
ಹನಿಯು ರೆಪ್ಪೆ ಸೇರಲು...
ಬಂದೆ ನೀನೂ ಹೇಗೆಯೋ
          ಕರೆಯದೇನೆ...
ಹೃದಯದ ಬಾಗಿಲ ಒಡೆದು
         ನೆಲೆಸಿದೆ ನನ್ನಲ್ಲೇ....
ಬಾಳಿನ ದೇವತೆ ನೀನು...
      ಪೂಜಿಸಲೇನೆ ನಾ..... ||

ಮನಸಿನ ತೊಯ್ದಾಟದಿ, ಕನಸಿನ ಚೂರೆಂಟಲಿ
    ನನ್ನ ಬೆನ್ನು ನೋಡಿ ನಗಲು...
ನಗು ಎಂದೆಯೋ ನೀ ಕೈಯ ಹಿಡಿದು...

ಬೆಳಕು ಬಂದು ನಿಂತಿದೆ
      ದಾರಿ ನೂರೆಂಟಾಗಿದೆ...
ಚಿಗುರು ಒಡೆಯೋ ಹಾಗಿದೆ
      ಗಗನ ಮುಟ್ಟೋ ಆಸೆಯೇ....
ಕಾಣದಂಥ ಮಾಯೆಯು
      ನಕ್ಕು ಬಿಡಲೆ......

ನಿನ್ನ ಮೊಗದ ನಗೂವಿಂದಲೆ
ಕನಸ ಗಂಟೂ ಬಿಚ್ಚಿದೆ
ಮರಿ ಹಕ್ಕಿ ರೆಕ್ಕೆ ಬಡಿದು
          ಹೊರಟಾಗಿದೆ.....
ನಾ ನಿನಗಾಗಿಯೇ......

ಬಯಕೆ ಏಕೋ ಹೆಚ್ಚಿದೆ..
ಬಯಕೆ ಏಕೋ ಬದುಕಿದೆ..
ನಗುವ ಹುಚ್ಚು ಹೆಚ್ಚಿದೆ.

ನೋವೇ ಅಳುವಾ ಹಾಗಿದೆ
    ಒಮ್ಮೆ ಚಿವುಟೀ ನೋಡಲೇ...

ನಿನ್ನ ಹೃದಯ ಕರೆದಂತಿದೆ...
        ಉಳಿದುಕೊಳಲೇ...

----------------------------- ರಘುರಾಮ್ ಜೋಶಿ----------

Tuesday, February 21, 2012

ಬ-ಕಾರದಾ ಭಾವ


ಭಾವದಾ ಬೆಳಕು ಬದುಕಿನಲಿರಲು...
ಬೇಡದಾ ಬಯಕೆ ಬೆಳೆಯುತಿರಲು..
ಬದುಕಲೇಕೆ ಬಟಾಬಯಲಲಿ...

ಬೇಯಲೇಕೇ ಬಿಸಿಲ ಬೇಗೆಯಲ್ಲಿ...

ಬಣ್ಣದಾ ಬಾನಿನಲ್ಲಿ... ಬೆನ್ನತ್ತಿದಾ ಬಿಂದುವಂತಾಗುವಾ ಬದಲು...

ಬಿತ್ತಿ ಬೆಳೆಯಬಾರದೇಕೆ ಪ್ರೀತಿಯಾ ಬಳ್ಳಿ...


-----by
ರಘುರಾಮ್ ಜೋಶಿ

ಬಯಲಿದು.....




Hey friends .... ಇದು "ROCK STAR" ಚಿತ್ರದ "Aur ho" ಹಾಡಿನ tune ಗೆ ಕನ್ನಡದಲ್ಲಿ ಸಾಹಿತ್ಯ ಬರ್ದಿದೀನಿ ....


ನನ್ನ ಬದುಕಿನ ಈ ಬಯಲಲಿ....
ಹಾಗೇ ಸುಮ್ಮನೆ ಕೇಳಿದೆ...
ನಾ ಕೂಗಿ ಕರೆದ ಸ್ವರ ಕೇಳೀತೆ...?
ಕಣ್ಣ ಬಿಂದು ಬಂದು ಏನಂದಿತೇ...?
ಬೇಕಾದ ನೆನಪೆಲ್ಲ ನಕ್ಕಿತು.. ಅತ್ತಿತು..
ಈ ಕ್ಷಣದಲಿ ನಾನೇನಾದೇ...?(2)
ಈ ಕ್ಷಣದಲಿ ನಾನೇನಾದೇ... ಕೇಳಿತು ಮನ ಕೇಳಿತು...
ಸೆಳೆತವು ಸೆಳೆತವು.. ಉಸಿರಿನ ಬಡಿತವು ಹೃದಯವು ಚೀರುತಿದೆ (2)
ಸೆಳೆತವು ಸೆಳೆತವು.. ಉಸಿರಿನ ಬಡಿತವು..... ಕೇಳಿತು ಏಕೆಂದೂ..
ನಿನ್ನ ಬದುಕಿನ ಗುರಿಯನು ತಿಳಿಯೇನು... ಈಗಲೇ || ||

ಮನ ನಿನ್ನದು ನೀ ತಿಳಿದುಕೋ...
ಅದು ನಿನ್ನದು ತಿಳಿ ಹೇಳಿಕೋ....
ಈ ಕ್ಷಣದಲಿ ನೀನೇನಾಗಿರುವೇ...?
ಈ ಕ್ಷಣದಲಿ ನೀನೇನಾಗಿರುವೇ.. ನೀ ನೋಡಿಕೋ ನಿನ್ನ ಬಿಂಬವ
ಜಾರಿದೆ ಜಾರಿದೆ ಕಣ್ಣಿನ ಹನಿಯಿದು ನಿಲ್ಲದೇ ಸರಿಯುತಿದೆ.. (2)
ನೋವಿನ ಮುಳ್ಳಲಿ ಹೃದಯವು ಒಡೆದಿದೆ... ಕೂಡಲು ಬರಬಹುದೇ...
ನಾ ಕಡಲಲಿ ದಾರಿಯ ಹುಡುಕುತ ಹೊರಟಿರುವೇ.... ರಕ್ಷಿಸೋ ಹರಿಯೇ.
ನಾ ಕಟ್ಟಿದ ಕನಸು ಗಾಳಿಗೆ ತೂರುತಿದೆ... ಕನಸೇನಾ ಇದುವೇ....
ಓ ಹೃದಯವೇ ನೀ ಕುಳಿತಿಹೆ ಓಡು ಓಡು ಈಗ ಕನಸೊಡನೆ
ಬದುಕಿದು ಬದುಕಿದು ನೊವಿನ ಸಾಲಿದು ನಕ್ಕರೆ ನೀ ಗೆಲುವೇ... (2)

ನೀನೆಂದೂ ನಗು, ಕಾರ್ಮೋಡ ಇದು..
ಬಿಸಿ ಗಾಳಿ ಬೀಸಲು.. ನೀ ಉಸಿರಾಡು..
ನಡಿತಾನೇ ಇರು.. ಬಿರುಗಾಳಿಯಾದರೂ..
ಕನಸೊಡನೆ.. ಸಹನೆಯಲಿ.. ಬರಡಿರುವಾ ಭೂಮಿಯೊಡನೆ..

ಅಬ್ಬರಿಸಿ.... ಸಿಡಿ ಸಿಡಿ ಸಿಡಿಲಿದು ಬೆಳಗಿದೆಯೋ..
ಹನಿ-ದನಿ ಮೊಳಗಲು ಚಿಗುರಿಹುದೋ..
ನನ್ನ ಬದುಕಿನ ಈ ಬಯಲಲಿ..
ನನ್ನ ಬದುಕಿನ ಈ ಬಯಲಲಿ ..||


-----by ರಘುರಾಮ್ ಜೋಶಿ


ಬದುಕಿದು ಮರಳ ತೀರ...





ಮರಳಿನ ತೀರದಂಥಾ ಬದುಕಿದು..
ಗಾಳಿಯಂಥಾ ಕಾಲವು..
ಬೀಸಿ ಬರುವ ದಿಕ್ಕು ತೋಚದು..
ಬೀಸುವುದು ಮಾತ್ರ ನಿಲ್ಲದು..
ಸೋಕಿ ಹೋದ ಗಾಳಿ ಮತ್ತೆ ಬರಲಿನ್ನು ಸಾಧ್ಯವೇ..?

ಹೇಳುತಿರುವಂತೆ ಅನಿಸುತಿದೆ ಏನೋ ಈ ಅಲೆಗಳು..
ಅಲೆಗಳಂತೇ ಕಡಲಾಳದಿಂದ ಎದ್ದು ಬಂದ ನೆನಪುಗಳಿಹುದು...
ಸ್ವರಗಳಂತೆ ಶಬ್ಧವು... ಖುಷಿಯ ಅಲೆಗಳಾಗಿ ಸೇರಿ..
ಹೃದಯವ ತಣಿಸಿಹುದು..

ವೀಣೆಯಾ ತಂತಿಯಂತೆ ಕಡಲಿನಾ ಅಲೆಗಳು..
ಕೊಳಲಿನಂತಾದ ಕಡಲ ತೀರವು..
ಕಿವಿಯ ತೂತನು ಗಾಳಿ ಸೇರಿ ನುಡಿಸುತಿಹುದು ಸುಶ್ರಾವ್ಯವ...
ಇಟ್ಟ ಹೆಜ್ಜೆಯಂತೆ ನೆನಪುಗಳು ..
ಅಳಿವುದೆಂದೋ, ಬದಲಾಗುವುದೆಂದೋ ಅಲೆಗಳಾ ಹೊಡೆತಕೆ.
ಕಳೆದ ಹೆಜ್ಜೆ ಗುರುತನು ತಿರುಗಿ ನೊಡಲೇಕೆ...?
ತಂಪು ಗಾಳಿಯಿರಲು ನಗುವಿನಾ ಸಂಜೆಯಲ್ಲಿ..
ನಡೆಯಬಾರದೇಕೆ ಹಿಂದೇಟಿಲ್ಲದೆ.
ಆಗಬಾರದೇಕೆ ಪುಟ್ಟ ಮಗುವಿನಂತೆ...
ರಂಗುರಂಗಿನಾ ಕಿರಣ ಭುವಿಯ ತಾಕಲು
ಸಾರ್ಥಕತೆಯ ಬೆಳಕು ನೀನಾಗಲು.

-----by ರಘುರಾಮ್ ಜೋಶಿ

ಇಲ್ಲ..... ನಾವೇ ಮೂರ್ಖರು...



He never leaves us in the first place. When we cry, he's right there.

ನಾವು ಅಂದ್ಕೊಂಡಿದ್ದೆಲ್ಲ ಸಿಕ್ ಬಿಟ್ರೇ ಏನು ಉಳ್ದಿರ್ತಿರ್ಲಿಲ್ಲ ನಮ್ life ಅಲ್ಲಿ ಮಾಡ್ಲಿಕ್ಕೆ ..
ವೊಂಥರಾ boring ಆಗೋಗಿರೋದು ಅಲ್ವ....
ಅದಿಕ್ಕೇ ಅವನಿಗೆ ಎಲ್ಲ ಗೊತ್ತು ಕಣ್ರೀ...

ಬರಗಾಲ ಬಂದು ಭೂಮಿ ಒಣಗಿ ಬರಡಾದಾಗ ಮಾತ್ರ ನೀರಿನ ಹನಿಯ ಬೆಲೆ ಗೋತ್ತಾಗೋದು...

So.......

ನಿಮ್ಮ ಬದುಕು ಅನ್ನೋ ಭೂಮಿ ಇನ್ನೂ ಬರಡಾಗಿಲ್ಲ ಕಣ್ರೀ, ಸುಮ್ನೆ ಬೇಡದೆ ಇರೋದನ್ನ ಮಾಡಿ..
ಬೇಡದೆ ಇರೋ ಥರ ಯೋಚನೆ ಮಾಡಿ..... ಸುಮ್ನೇ ಬರಡು ಮಾಡ್ಕೋಬೇಡಿ.....
ಎಲ್ಲಾರೂ ಅವನ ಮಕ್ಕಳೇ ಕಣ್ರೀ...
ಯಾರನ್ನೂ ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲಾ ಅವ್ನು...
ಸ್ವಲ್ಪ ಪರೀಕ್ಷಾ ಪ್ರಿಯ ಅಷ್ಟೇ...

ಇಲ್ಲ.... ನಾವೇ ಮೂರ್ಖರು... ಯಾಕೆ ಗೊತ್ತಾ...

ಭೂಮಿ ಬರಡಾಯ್ತು ಅಂದ್ ಕೂಡ್ಲೆ ಕಾರಣ ತಿಳಿದು ಕೊಳ್ಳದೇ, ಹುಡುಕದೇ ವಿನಾಕಾರಣ ಅವನನ್ನ ಬಯ್ಯುತ್ತಾ, ಶಪಿಸುತ್ತಾ ಕಾಲ ಕಳಿತೀವಿ...
There is a reason for everything..There is no accident in our Life.. Everything happens for some reason.. ಅನ್ನೋದನ್ನ ಅರ್ಥನೇ ಮಾಡ್ಕೊಳೋದಿಲ್ಲ..
ವೇಳೆಗಾಗಲೇ ಜೊರು ಮಳೆ ಬರತ್ತೆ... ಮತ್ತೇ ಸಮಾಧಾನ ಆಗತ್ತೇ... ಖುಷಿ ಆಗತ್ತೇ..
ಭುವಿ ತುಂಬಾ ಹಸಿರಾಗುತ್ತೆ... ಒಳ್ಳೆ ಪರಿಮಳ ಸೂಸತ್ತೆ.... ಅದೇ ಗುಂಗಲ್ಲೇ ಮೈ ಮರಿತೀವಿ...

ಆಗ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ದುರಹಂಕಾರ ಅನ್ನೋದು ನಮ್ಗೆ...
ಹಳೆಯ ಕಷ್ಟ ಮರೆತು ಹೋಗಿರುತ್ತೇ, ಹಳೆಯ ಬಂಧ ಮರೆತೋಗಿರುತ್ತೆ.... ಮುಂದೆ ನೋಡುವ ಕಣ್ಣು ಕುರುಡಾಗಿರುತ್ತೇ...
ಅಮಲಿನಲ್ಲಿ ಏನೆನೋ ಅಂತೀವೀ... ಮಾಡಿದ್ದು, ಅಂದಿದ್ದು ಅರಿವಿಗೆ ಗೊತ್ತೇ ಆಗಿರಲ್ಲ.....
ಆಗ ಅವನನ್ನ ಮರೆತೇ ಬಿಟ್ಟಿರ್ತೀವಿ

ಸುರಿಸ್ತಾನೆ ಮಳೆನ ಜೋರಾಗಿ..... ಅತಿಯಾಗತ್ತೇ... ಪ್ರವಾಹ ಶುರುವಾಗತ್ತೇ....
ಮತ್ತೆ ಅದೇ... ಶಪಿಸುತ್ತಾ, ಬಯ್ಯುತ್ತಾ ಕೂರ್ತಿವಿ... ಆಗಲೂ ಕಾರಣ ಅರಿತು ಕೊಳ್ಳಲಿಕ್ಕೆ ಕನಿಷ್ಠ ಪ್ರಯತ್ನ ಕೂಡ ಮಾಡೋದಿಲ್ಲ ನಾವು...
ಕೂಗೋದು, ಚೀರೊದು ನಿಲ್ಸಲ್ಲ.... ಆಗೋದು ನಿಲ್ಲಲ್ಲ...

ಇಲ್ಲ... ಅವನನ್ನ ಅರ್ಥನೇ ಮಾಡಿಕೊಳ್ಳೊದಿಲ್ಲ ನಾವು.....
ಆದ್ರೆ ಅವ್ನು ಮಾತ್ರ ನಾವೇನೇ ಮಾಡಿದ್ರೂ ಪ್ರೀತ್ಸೊದು ಮಾತ್ರ ಬಿಡಲ್ಲ... ಪ್ರೀತಿಸ್ತಾನೇ ಇರ್ತಾನೆ....
ಮಾತಾಡಿಸಿ ಹೇಳೊಣವೆಂದ್ರೇ.... ಕೇಳೋ ಕಿವಿ, ಕಣ್ಣು ಏನೂ ಇಲ್ವೇ ನಮ್ಗೆ...
ಎರಡನ್ನೂ ಏನೇನಕ್ಕೋ ಉಪಯೊಗಿಸ್ತೀವಿ ಇದೊಂದಕ್ಕೆ ಬಿಟ್ಟು...

ಪರಮಾತ್ಮ ಅವನು ಹೇಳಿದ್ದನ್ನ ಕೇಳಲಿಕ್ಕೆ, ಕಾಣಲಿಕ್ಕೆ ಅಂತನೇ ಹೃದಯ ಅನ್ನೋದನ್ನ ನಮಗೆ ಕೊಟ್ಟಿದಾನೆ ಕಣ್ರೀ...
Heart is a pure soul of a god..
Atleast.. ಹೃದಯ ಹೇಳಿದ್ದನ್ನಾದ್ರೂ ಕೇಳಬೇಕಲ್ಲ ನಾವು .......ಊಹ್ಹೂ ... ನಾವ್ ಕೇಳಲ್ಲ....
ಅದಿಕ್ಕೇ ಅತಿವೃಷ್ಠಿ, ಅನಾವೃಷ್ಠಿ........ ಆಗಲಾದ್ರೂ ನಮ್ಗೆ ಅವನ ನೆನಪಾಗತ್ತೇನೋ ಮರೀದೆ...
ಅವನ ಮಡಿಲಲ್ಲೇ ಮಗುವಾಗಿರಬಹುದೆಂದು
ನಮ್ಮನ್ನು ನೋಡ್ಕೊಂಡು ಅವ್ನು ಅದೆಷ್ಟು ನೋವು ಅನುಭವಿಸ್ತಾ ಇರಬಹುದೋ ಎನೋ.... ಅಲ್ವ..?
ಅವ್ನಾದ್ರೂ ಏನು ಮಾಡ್ತಾನೆ ಹೇಳಿ... ತನ್ನ ಮಕ್ಕಳಿಗೆ ನೋವಾದ್ರೂ ಧರ್ಮಕ್ಕಾಗಿ, ಒಳ್ಳೆಯದಕ್ಕಾಗಿ ಚಾಟಿ ಬೀಸ್ತಾನೆ ಇರ್ತಾನೆ........
ಇಲ್ಲ.... ನಾವೇ ಮೂರ್ಖರು....

ನಾವು ಕೊನೇತನಕ ಬಯಸೋದು ಅಂದ್ರೇ ನಮ್ಮದೊಂದೇ ಸುಖ, ಸಂತೋಷ, ರಕ್ಷಣೆ ಮಾತ್ರವೆ.... ಪಕ್ಕದಲ್ಲಿರೋರು ಚೀರಾಡ್ತಾ ಸಾಯ್ತಾ ಇದ್ರೂ ಕೂಡ....
ಅದ್ ಬಿಟ್ರೇ ಇನ್ನೇನು ಬೇಡ ನಮಗೆ.... ದುಃಖನೇ ಬೇಡ ಅಂತೀವೀ.....
Ready- ನೇ ಇರಲ್ಲ ನಾವು ಕಷ್ಟ ಅನುಭವಿಸೋದಕ್ಕೆ...
ಆಮೇಲೆ ಒದ್ದಾಡ್ತೀವಿ.... ಬದಲಾಗಿ ಏನೂ ಮಾಡಲ್ಲ... ಹಂಚಿ ತಿನ್ನೋ ಸ್ವಭಾವವೆ ಇಲ್ವ ಹಾಗಾದ್ರೇ....

ಕೊನೇತನಕ ಕೂಗೋದು ಬಿಡಲ್ಲ..... ಆಗೋದು ನಿಲ್ಲಲ್ಲ....
ಇಲ್ಲ..... ನಾವೇ ಮೂರ್ಖರು.....ಅಲ್ವ...? ಹಹ್ಹಹಹ್ಹ


-----by ರಘುರಾಮ್ ಜೋಶಿ