ಮರಳಿನ ತೀರದಂಥಾ ಬದುಕಿದು..
ಗಾಳಿಯಂಥಾ ಕಾಲವು..
ಬೀಸಿ ಬರುವ ದಿಕ್ಕು ತೋಚದು..
ಬೀಸುವುದು ಮಾತ್ರ ನಿಲ್ಲದು..
ಸೋಕಿ ಹೋದ ಗಾಳಿ ಮತ್ತೆ ಬರಲಿನ್ನು ಸಾಧ್ಯವೇ..?
ಹೇಳುತಿರುವಂತೆ ಅನಿಸುತಿದೆ ಏನೋ ಈ ಅಲೆಗಳು..
ಅಲೆಗಳಂತೇ ಕಡಲಾಳದಿಂದ ಎದ್ದು ಬಂದ ನೆನಪುಗಳಿಹುದು...
ಸ್ವರಗಳಂತೆ ಶಬ್ಧವು... ಖುಷಿಯ ಅಲೆಗಳಾಗಿ ಸೇರಿ..
ಹೃದಯವ ತಣಿಸಿಹುದು..
ವೀಣೆಯಾ ತಂತಿಯಂತೆ ಕಡಲಿನಾ ಅಲೆಗಳು..
ಕೊಳಲಿನಂತಾದ ಕಡಲ ತೀರವು..
ಕಿವಿಯ ತೂತನು ಗಾಳಿ ಸೇರಿ ನುಡಿಸುತಿಹುದು ಸುಶ್ರಾವ್ಯವ...
ಇಟ್ಟ ಹೆಜ್ಜೆಯಂತೆ ನೆನಪುಗಳು ..
ಅಳಿವುದೆಂದೋ, ಬದಲಾಗುವುದೆಂದೋ ಅಲೆಗಳಾ ಹೊಡೆತಕೆ.
ಕಳೆದ ಹೆಜ್ಜೆ ಗುರುತನು ತಿರುಗಿ ನೊಡಲೇಕೆ...?
ತಂಪು ಗಾಳಿಯಿರಲು ನಗುವಿನಾ ಸಂಜೆಯಲ್ಲಿ..
ನಡೆಯಬಾರದೇಕೆ ಹಿಂದೇಟಿಲ್ಲದೆ.
ಆಗಬಾರದೇಕೆ ಪುಟ್ಟ ಮಗುವಿನಂತೆ...
ರಂಗುರಂಗಿನಾ ಕಿರಣ ಭುವಿಯ ತಾಕಲು
ಸಾರ್ಥಕತೆಯ ಬೆಳಕು ನೀನಾಗಲು.
-----by ರಘುರಾಮ್ ಜೋಶಿ
this is really good dear, great going-----spoorti
ReplyDelete