:: ನನ್ನ ಬಗ್ಗೆ...::

ನಾನೇನ ಹೇಳಲೀ ನನ್ನ ಬಗ್ಗೆ...
ಒಂದು ರೀತಿಯ ಮುಜುಗರ..

ನನ್ನನ್ನು ಪ್ರೀತಿಸಿದವರಿಗೆ, ಅರ್ಥ ಮಾಡಿಕೊಂಡವರಿಗೆ ಅರ್ಥೈಸುವ ಅವಶ್ಯಕತೆಯಿಲ್ಲ...
Because they already knows me very well..

ನಾನು ಬೇಡವಾದವರಿಗೆ ಕೂಡ ನನ್ನ ಬಗ್ಗೆ ವಿವರಿಸುವ ಅವಶ್ಯಕತೆ ಇರುವುದಿಲ್ಲ...
Because they don't have a patience to hear what I'm saying..

ಅಲ್ವ..?
ಇದು ಕಟುವಾದರೂ... ಸತ್ಯ..!!!

...
ಆದ್ರೂ ಕೂಡ ಎಲ್ಲೊ ಒಂದು ಆಸೆ..
ಯಾರಾದ್ರೂ ಇದಾರೇನೋ ನನ್ನ ಮಾತನ್ನು ಆಲಿಸೋರು ಅಂತ...

"ಮಲೆನಾಡ ಹುಡುಗ" ನಾನು...
ಬದುಕೆಲ್ಲ ಒಂದು ರೀತಿಯಲ್ಲಿ ಒಂಟಿಯಾಗಿಯೇ ಕಳೆದವನಿಗೆ ಹೇಳಬೇಕೆನಿಸಿದಾಗ..
ಶಬ್ಧವಿಲ್ಲದೇ ಮರ-ಗಿಡಗಳೊಡನೆ, ಭೂಮಿಯೊಡನೆ, ಗಾಳಿ-ಸೂರ್ಯ-ಚಂದ್ರರೊಡನೆ, ಪರಿಸರದೊಡನೆ ಹೇಳಿಕೊಳ್ಳುವವ ನಾನು...

ಹೃದಯ ಉಕ್ಕಿ ಬಂದಾಗ ಮನದಲಿ
ಮಾತು ಹೊರಡುವುದಕ್ಕಿಂತ ಪೆನ್ನು ಪೇಪರ್ ಇದ್ರೇ ಕೈ ಓಡತ್ತೆ,
ನಂತರವೆಲ್ಲ.. ಮನದ ಭಾವದಲ್ಲಿ ಜೋರಾಗಿ ಮಳೆ ಬಂದು ನಿಂತ ಮೇಲಿನ ಮೌನದಂತೆ, ನಿಟ್ಟುಸಿರಿನ ನಿಶ್ಯಬ್ಧದಂತೆ...

Anyway.....ಸುಮ್ನೆ ವಟ-ವಟ ಅಂತ ಜಾಸ್ತಿ ತಲೆ ತಿಂತಿದೀನಿ ಅನ್ನಿಸ್ತಾ ಇರಬಹುದು..
ನನ್ ಜೊತೆ ಯಾವಾಗ್ಲೂ ನೀವಿದೀರಾ ಅಂದ್ಕೊಡಿದೀನಿ..
Just read it...enjoy it...Feel this blog that's it...

ಇನ್ನೂ ಏನ್ ಹೇಳ್ಲಿ ನನ್ನ ಬಗ್ಗೆ....? ಹ್ಞ.... Blog ಅಲ್ಲಿರೋ ಎಲ್ಲ Articles ಓದಿ.. ನಂತ್ರ ನೀವೇ ನನ್ನ ಬಗ್ಗೆ ಹೇಳ್ತೀರಾ ನೊಡ್ತಾ ಇರಿ...

--- ಇನ್ನೊಂದು ವಿಚಾರ.... ಪ್ರತಿಯೊಂದನ್ನೂ ಓದಾದ ನಂತರ ಹೇಗನ್ನಿಸಿತು ಅಂತ ಬರೆಯೋದನ್ನ ಮಾತ್ರ ಮರೀಬೇಡಿ...
ಇನ್ನೂ
ಹೆಚ್ಚು ಬರೆಯಲಿಕ್ಕೆ ಉತ್ಸಾಹ ಇರುತ್ತೆ ಅಲ್ವ..? ಅದ್ಕೇ....