(ಹೀಗೊಂದು ಕೃಷ್ಣ-ರಾಧೆಯರ
ಸಂಭಾಷಣೆ, ಕೆ. ಎಮ್. ಮುನಿಶಿಯವರ "ಕೃಷ್ಣವತಾರ"ದಲ್ಲಿ ಬರುವ ಸಂದರ್ಭವನ್ನವಲಂಬಿಸಿ ಸ್ಪೂರ್ತಿಗೊಂಡು
ಬರೆದಿದ್ದೇನೆ. ನನ್ನ ಮನದಲ್ಲಿ ಮೂಡಿದ ದೃಶ್ಯವಷ್ಟೆ. ಕಾಲ್ಪನಿಕ)...
My father used to tell the story about how munishi has explained the situation when krishna leaving the gokula to mathure for "BILLA HABBA".. Inspired by that story i have written in my own view about that situation..dont know wat xactly happnd..But its just inspird by my father's word abt krishnavataara... and Collage of photos has done by me.. JUST ENJOY THE FEELING
ನೆನಪುಗಳ ಮೋಡವು ಗಂಟು ಕಟ್ಟಿ
ಕಾರ್ಮೋಡವಾಗಿತ್ತು.. ಗುಡುಗು ಸಿಡಿಲಿಗೆ ಸಿಕ್ಕಿ ಹೃದಯದ ಮೇಲೆ ಮಳೆ ಸುರಿವ ವಾತಾವರಣವಿತ್ತು.. ಮನದಲ್ಲೊಂದು
ಬಿಂದು ಹೊರಬರಲು ಕಾಯುವಂತಿತ್ತು ಆ ಸಮಯ.. ಹೊರಟು ನಿಂತ ಕೃಷ್ಣನ ಕಣ್ಣನ್ನೇ, ಕರಗಿಸುವಂತೆ ದಿಟ್ಟಿಸುತ್ತಾ
ಎದೆಗಪ್ಪಿ ನಿಂತಿದ್ದಳು ಹೆಮ್ಮರದ ಮೇಲಿನ ಬಳ್ಳಿಯಂತೆ ಸುತ್ತಿಕೊಂಡು ಆ ಮನದರಸಿ ರಾಧೆ.. ಅದೇಷ್ಟೋ
ಮಾತುಗಳು ಹೃದಯ ಬಡಿತಗಳಲ್ಲೇ ಹರಿದಿದ್ದವು..
ಬೃಂದಾವನದ ಅಣುಅಣುವಲ್ಲೂ ಅವರ ಪ್ರೀತಿಯ ಕ್ಷಣವಿತ್ತು,
ನಗುವಿತ್ತು, ಆ ತುಂಟಾಟವಿತ್ತು.. ಪ್ರೇಮದ ಕಡಲಿಗೆ
ಎರಡು ನದಿಗಳು ಸೇರಿ ರಮಿಸಿದ ಹಾಗೆ.. ಅರುಣನಾ ರಭಸಕೆ
ಬೃಂದಾವನದೊಡನೆ ಅಲ್ಲಿಯೇ ಕಟ್ಟಿ ಬೆಳೆಸಿದ ಕನಸೊಂದು ಕೊಚ್ಚಿಹೋಗುತಿರುವಂತೆ ಭಾಸಿಸುತ್ತಿತ್ತು.. ಇನ್ನೆಲ್ಲಿಯ
ತುಂಟತನ, ಇನ್ನೆಲ್ಲಿಯ ಸವಿಗನಸು, ಇನ್ನೆಲ್ಲಿಯ ಆ ಸರಸ ಬೃಂದಾವನಕೆ.. ಅನಾಥ ಪ್ರಜ್ನೆಯಿಂದ ನರಳುತ್ತಿತ್ತು
ಆ ಬೃಂದಾವನ... ಅಲ್ಲಿಯ ಪ್ರತಿಯೊಂದು ಅಣುವಿಗೂ ಹೊಸ ಜೀವವಿತ್ತಿದ್ದು ಅವರ ಪ್ರೀತಿ.. ಕೊನೆಗೂ ಸೂರ್ಯ
ಮುಳುಗುವ ಸಮಯ ಬಂದೇ ಬಿಟ್ಟೀತ್ತು... ಮತ್ತೆ ಉದಿಸುವುದು ಅದಿನ್ನೆಲ್ಲೋ...!!
ಕಂಡಂತೆ ಕನಸು.. ಈಗ ಮಸುಕಾಗಿತ್ತು....
" ಏಕೆ ಹೊರಟೆಯೋ ಕೃಷ್ಣ
ಎನ್ನ ಮನದಂಗಳವ ಬಿಟ್ಟು... ಆಟ ಬೇಸರಿಸಿ ಮಣ್ಣ ಮನೆಯಂತೆ ಮನಸ ಒಡೆದು ಅದೆಲ್ಲಿಗೆ ಓಡುತಿರುವೆಯೊ ಎನ್ನ
ಬಿಟ್ಟು.... ಏಕೀ ಸಿಟ್ಟು ಇಲ್ಲಿನ ಬದುಕಿನ ಮೇಲೆ.. ಏಕೆ ಬದಲಾಗಿದೆ ನಿನ್ನ ಮನವು ಕಲ್ಲಿನಂತೆ.. ಏಕೆ
ಕೃಷ್ಣ’ ಸಾಲಲಿಲ್ಲವೆ ನಿನ್ನ ಪ್ರೀತಿಯ ಸಾಗರಕೆ ಎನ್ನ ಮನದ ಭುವಿಯಲಿ ಜಾಗ?.. ಹೇಳು ಕೃಷ್ಣ ಏಕೀ ಮೌನ..
ಏನಾದರೂ ಹೇಳು ಕೃಷ್ಣ...."
.... " ಹ್ಮ... ರಾಧೆ.. ಕೇಳಿಸ್ತಿದೆಯಾ
ಈ ಗಾಳಿಯ ಸದ್ದು.. ನಿನಗೆ ಬರೀ ಶಬ್ಧವಷ್ಟೇ ಕೇಳಿಸ್ತಿರಬಹುದು ಆದರೆ ನನಗೆ.. ಹುಟ್ಟಿದಾಗಿನಿಂದ ಏನೋ
ಹೇಳುತ್ತಿರುವಾ ಹಾಗೇ ಭಾಸಿಸುತ್ತಿದೆ. ಯಾರೋ ಕರೆದಂತೆ, ಏನೋ ಅಂದಂತೆ, ಯಾವುದೋ ಕೂಗು, ಏನೊ ನಗುವು..
ನನ್ನಿರುವಿಕೆಗೆ ಕಾರಣವೆನೋ ಯಾರೋ ನುಡಿದಂತೆ ಪ್ರತಿಯುಸಿರೂ ಏನೋ ಅಂದಂತೆ.. ಏನೋ ಮೊಡಿ ಮಾಡಿದಂತೆ
ಈ ಗಾಳಿಯೊಡನೆ ಹಾರುವಾ ಬಯಕೆಯು.. ಇಲ್ಲಿನ ಬದುಕಿನ ಮೇಲೆ ಸಿಟ್ಟಲ್ಲ. ಎಲ್ಲಿಯೋ ಬದುಕು ಕರೆದಂತೆ
.... ನಿನ್ನ ಪ್ರೀತಿಯಿಂದ ಬಲಿಷ್ಟ ರೆಕ್ಕೆ ಬಂದತಿಂದೆ ಹಾರುವಾ ಬಯಕೆ ಹೆಚ್ಚಾಗಿದೆ.. ನನ್ನೊಡನೆ ನೀನೂ
ಹಾರುತ್ತೀಯಾ ರಾಧೆ ಒಂದು ಅದ್ಭುತವೇನೊ ಕಾದಿದೆಯನಿಸುತ್ತಿದೆ ಬರುವೆಯಾ ನನ್ನೊಡನೆ... "
..... " ಅದ್ಭುತವೇ? ಹ್ಹ ಹ್ಹ.. ಕೃಷ್ಣ
ನನಗೆ ನಿನ್ನ ಬಿಟ್ಟು ಬೇರೆ ಅದ್ಭುತವೇನಿದೆಯೊ.. ನನಗೆ ನೀನೊಬ್ಬ ಇದ್ದರೆ ಜಗವೆತಕೊ ಕೃಷ್ಣ... ಇಲ್ಲಾ
ಆಗಲ್ಲ ಕೊಳಲ ನಿನಾದ ಕೇಳಿದ ಕಿವಿಗೆ ಆರ್ತನಾದ ಕೇಳಲಾಗದು ಕೃಷ್ಣ.. ಮುಗ್ಧ ಮನಸಿಂದ ನುಡಿಸಿದ ಕೊಳಲ
ದನಿಯಂತೇ ಇಡೀ ಗೋಕುಲಕ್ಕೆ ಪ್ರೀತಿ, ಕರುಣೆ, ವಾತ್ಸಲ್ಯ, ಖುಶಿಯ ಹೃದಯ ತುಂಬಾ ಧಾರೆ ಎರೆದವನು ನೀ...
ಆ ಕೈಯಲ್ಲಿ ಕತ್ತಿ ಹಿಡಿದು ಸಾವಿರಾರು ಜನರ ರಕ್ತ ಬಸಿವ ದೃಶ್ಯ ನೊಡುವ ಸೌಭಾಗ್ಯ ನನಗೆ ಬೇಡ ಕೃಷ್ಣ..
ಹಸಿ ರಕ್ತವ ಕುಡಿವ ರಕ್ಕಸನಂಥಾ ಕತ್ತಿಗೆ ಅದೆಷ್ಟು ಬಲಿಗಳೋ.. ಇಲ್ಲಾ ಅವನು ಈ ಕೃಷ್ಣನಾಗಿರಲು ಸಾಧ್ಯವೇ
ಇಲ್ಲ.... ತಿಳಿದಿದೆ ಎನಗೆ ನೀ ತಿರುಗಿ ಬರಲಾರೆ ಎಂದು.. ನನ್ನ ಕೃಷ್ಣ ಇಲ್ಲೇ ಇದ್ದಾನೆ ಮುಗ್ಧ ಮನದ
ತುಂಟ ನಲ್ಲ.. ಅವನ ಕೊಳಲ ದನಿಯು ಇನ್ನು ಗುಯ್ಯ್ ಎನ್ನುತ್ತಲೆ ಇದೆ, ಕತ್ತಿಯ ಠೆಂಕರಿಸುವ ದನಿಯಲ್ಲ...
ಮಾತಿಗೆ ಮುಂಚೆ ಕಾಳೆಲೆದು ಕೋಪ ತರಿಸುವವ.. ಮಡಕೆ ಒಡೆದು ಮನೆಯಲ್ಲಿ ಬಯ್ಯುವಂತೇ ಮಾಡುವ ತುಂಟ.. ಅತ್ತಾಗ
ಕಚಗುಳಿಯಿತ್ತು ನಗಿಸುವವ.. ಅಷ್ಟೂ ಗೋಪಿಕೆಯರ ಮನಗೆದ್ದು ನನ್ನ ಗೊಳು ಹುಯ್ದುಕೊಳ್ಳುವವ.. ಗೋಕುಲದಂಥಾ
ಹಣತೆಗೆ ದೀಪದಂತೇ ಬೆಳಗಿದ ಕೃಷ್ಣ.. ಇಲ್ಲಾ ನನ್ನ ಕೃಷ್ಣ ಎಲ್ಲೂ ಹೊಗಲ್ಲ ಇಲ್ಲೇ ಇರ್ತಾನೆ.. ಇಲ್ಲಿನ
ಅಣು ಅಣುವಲ್ಲೂ ನಿನ್ನ ಕಾಣುತ್ತೇವೆ... ನೆನಪುಗಳು ಇನ್ನೂ ಹಸಿಯಾಗಿದೆ, ಹಾಗೆ ಇರುತ್ತದೆ ಕೂಡ..
--- ಇಲ್ಲ ರಾಧೆ ಬರುವೆನೊಮ್ಮೆ
ಜಗವ ಗೆದ್ದು... ಅದೆಷ್ಟೇ ಸಾಗರದಾಚೆಯಿರಲಿ ನಿನಗೊಸ್ಕರ, ಗೋಕುಲಕ್ಕೊಸ್ಕರ..
--- ನೀನು ಹೊರಟಿರುವುದು
ಬಿಲ್ಲ ಹಬ್ಬಕ್ಕೆ ಕೃಷ್ಣ... ಕತ್ತಿ ಹಿಡಿತು ಅವಡುಗಚ್ಚಿ ರಕ್ತ ಸಾಗರದಿ ರುದ್ರನರ್ತನ ಮಾಡುವ ಕೃಷ್ಣನ
ಕಣ್ಣನ್ನು ನಾನು ಹೇಗೆ ಉಹಿಸಲೋ.. ಹಿಂಸೆಯಾಗುತಿದೆಯೊ ಕೃಷ್ಣ...
(ಕಣ್ಣಂಚಿನ ಹನಿಯ ಒರೆಸಿ ನಗುತ್ತಾ...) ಆದರೆ.. ನಮ್ಮ
ಹೃದಯ ದೇಗುಲದಿ ನೀನೆ ದೇವನು.. ನಿನ್ನ ಪ್ರೇಮ ಆರಾಧನೆಯೇ ಆನಂದವೆಮಗೆ... ನಿನ್ನ ಪ್ರತಿ ನೆನಪುಗಳೇ
ಸೂರ್ಯನ ಕಿರಣಗಳು... ಹಾರು ಕೃಷ್ಣ ದೂರ ಹಾರು ನಿನ್ನ ದೃಷ್ಟಿ ಅದೆಷ್ಟು ದೂರ ನಾಟುವುದೋ ಹಾರು...
ನೀನು ಖುಶಿಯಾಗಿದ್ದರೆ ಜಗವೇ ನಗುವುದೊ ಕೃಷ್ಣ... ನಾ ಬಯಸುವ ನಿನ್ನ ಖುಷಿಯೇ ಎನ್ನ ನಗುವು ಕಣೋ...
ಏನೋ ಅದ್ಭುತ ಕಾದಿದೆಯೇನೋ ಅನ್ನುತ್ತಿದ್ದೀಯಾ ಹೋಗು ಜಗವ ಬೆಳಗಿ ಬಾ... ನಿನಗೊಸ್ಕರ ಎನ್ನ ಮನವು, ಗೊಕುಲದ ಬಾಗಿಲು ಸದಾ ತೆರೆದಿರುವುದೋ
ಕೃಷ್ಣ.. ಹೋಗಿ ಬಾ.."
ಗುಡುಗು ಸಿಡಿಲ ಸದ್ದಡಗಿ
ಮಳೆ ಮರೆತು ಹೊಯ್ಯುವುದ ನೋಡುತ್ತ ನಿಲ್ಲಲು ಆಗಸದಿ.. ಮೌನವು ಒಮ್ಮಿಂದೊಮ್ಮೆಲೆ ಬಂದಪ್ಪಳಿಸಿದೆ ಭುವಿಯ
ಮನಕೆ... ಅದೇಕೋ ಕಾಣೆ ರಾಧೆಯ ಮಾತಿಕೆ ಕೃಷ್ಣನ ಗಂಟಲೊಣಗಲು, ಇನ್ನೂ ಸ್ವಲ್ಪ ಹೊತ್ತಾದರೂ ಸುರಿಯಬಾರದಿತ್ತೇ
ವರುಣನೂ.. ತುಟಿಯ ಅಂಚಲ್ಲಿ ಅದೆನೊ ಅರ್ಥವಾಗದ ನಗುವೊಂದ ಬಿಟ್ಟು ಇನ್ನೇನೂ ಉಳಿದಿರಲಿಲ್ಲ ಅವನಲ್ಲಿ..
ಅರ್ಥವಾಗಿತ್ತು ಅವನಿಗೆ... ಆಗಸದಂಥಾ ಹೃದಯದೊಡೆಯನ ಪ್ರೀತಿಯ ಮೊಡವು ಗೋಕುಲದಿ ಸುರಿಸಿ ಹೊರಟು ನಿಂತಿದೆ
ಇನ್ನೆಲ್ಲಿಯೋ.... ಅವಳ ಕಣ್ಣ ನೋಟದಿಂದ ಸಾವಿರಾರು ನೆನಪುಗಳ ಹೊತ್ತು, ಕೊನೆಗೊಂದು ಬಾರಿ ಅದೇ ನಗುವಲಿ
ಹಣೆಗೆ ಮುತ್ತಿಕ್ಕಲು ಕೃಷ್ಣನು.... ಬೀಸಿ ಬಂದಂತಿದೆ ಅದೆತ್ತಲಿಂದಲೋ ಗಾಳಿಯು ಮೌನ ಸಾಗರವ ದಾಟಿ ಒಡೆಯನ
ಕರೆದೊಯ್ಯಲು... ರಥವೇರಿ ಹೊರಟೇ ಬಿಟ್ಟನು..
ಬೆನ್ನು ತಿರುಗಿದೆ ಮೆಲುಕು
ಹಾಕುತ ನೆಪದ ನೆನಪನು... ತಿರುಗುತಲೇ ಇದೆ ಕೃಷ್ಣನ ನೆನಪಲಿ ಭುವಿಯೊಂದು ಗೋಕುಲದಿ... ಗೋವುಗಳು ದಿನನಿತ್ಯದಂತೆ
ಮೇವ ಹುಡುಕಿದೇ, ಸಂಜೆಯಾದೊಡೆ ತಿರುಗಿ ಗುಡಿಸಲ ಸೇರುತಿದೆ...
ಹಹ್ ಹ್ಹ ಇವನೋ... ಸೂರ್ಯ
ಕಿರಣದಂಥಾ ಪ್ರಖರದವನು ಒಮ್ಮೆ ಹೊರಟರೆ ತಿರುಗುವ ಮಾತೆಲ್ಲಿ ಅದೇನೇ ಆಗಲಿ... ಮುಂದೆ ನಡೆದಿದ್ದೆಲ್ಲ
ಮಹಾಕಾವ್ಯವಾಯಿತು..
-------- ರಘುರಾಮ್ ಜೋಶಿ--------------