Thursday, October 17, 2013

ನಿನ್ನ ನೆನಪಲಿ ಸದಾ....ಚಂದಿರ ತಂದ ದಿಂಬಿದು, ನಿನ್ನ ನೆನಪು ಸದಾ....
ದಾರಿಯ ನೆರಳು ನಿನ್ನಯ, ಮಾತು ಸದಾ....
ನಾ ನಿನ್ನವನು... ಅದುವೆ ನಿಜಾ...
ನೀ ಹೂವಾದರೆ ನಾ.. ಸಿಹಿಯು ಸದಾ....

ಕಣ್ಣ ಬಿಂಬದಿ ನೀನೇ ಕಾಣುವೆ ನನ್ನ ನಾ ನೊಡಿದರೂ....
ರೋಗವಾಗಲು ನಿನ್ನಯ ಪ್ರೀತಿಯು ಔಷಧಿಯೇ ನೀನಾದೆ...
ಆದೆ ನೀನು ರಾಗವೀಗ ನನ್ನ ಕವನಕೆ...
ನೌಕೆಯಲಿ ಹಾಯಿಯಾಗಿಹೆ ಗಾಳಿಯೇ ನೀನಾಗಿರಲು...
ನಿನ್ನ ಪ್ರೀತಿಯ ದಿಕ್ಕಿನೆಡೆಗೆ ಎನ್ನ ಈ ಜೀವನವು....

ನಿನ್ನ ಪ್ರೀತಿಯ ಕನ್ನಡಿ ನಾ..
ಎಷ್ಟು ನುಲಿದರೂ ಸಾಲದು ದೃಷ್ಠಿಯು..
ನೀನು ಹೇಗೋ, ನಾನೂ ಹಾಗೆಯೇ...

ನಿನ್ನಯ ಪ್ರೀತಿಯಾ ಅಳು ನಗುವಿನಾ ಮೌನ ಮಾತಾದಾಗ ಪ್ರತಿಬಿಂಬ ನಾನಾಗಿಹೆ...
ನೀನು ಹೇಗೋ, ನಾನೂ ಹಾಗೆಯೇ...

ಹೇಗೆ ತಾನೆ ಅಡಗಿಸಿಟ್ಟಿಹೆ ನಿನ್ನ ಸ್ಪರ್ಶದಿ ಮಿಂಚಿನಾ ಆ ಸಂಚಾರವ...
ರವಿಯು ಮುಳುಗಿ ಹೊದರೂನು ನಿನ್ನ ಕಿರಣವು ಬೆಳಗಿದೆ ಎನ್ನೆದೆಯಲಿ...
ಇನ್ನೆಷ್ಟು ಹುಣ್ಣಿಮೆಯ ಕಾಯಬೇಕೇ ತುಂಟ ನಲ್ಲೇ??..
ಮನದಿ ನಿನ್ನಯ ಶ್ರಾವಣ ಬರಲು....
ಮನದ ಬರಡಲಿ ಹಸಿರು ಮೂಡಲು...

-----------ರಘುರಾಮ್ ಜೋಶಿ---

Tuesday, September 17, 2013

ನೆನಪಿನಾ ನೌಕೆ....


(ಗೆಳೆಯರ ಬೀಳ್ಕೊಡುಗೆಯ ಸಮಯದಲ್ಲಿ ಬರೆದ ಸಾಲುಗಲು)

ನೆನಪಿನಾ ನೌಕೆಯಿದು ಕನಸಿನಾ ಕಡೆಗೆ...
ಕಹಿಯಾಗಿಹ ಮನಗಳು ಸಿಹಿಯಾಗಲಿ..
ಸಿಹಿಯಾದ ನೆನಪುಗಳು ಸಿರಿಯಾಗಲಿ..
ಕಡಲಿನಾ ಬದುಕಿದು ಭಾವಗಳು...

ಅಗಲಿಕೆಯ ನೆಪದಲ್ಲಿ ಹೊಸ ದಿಕ್ಕಿನೆಡೆಗೆ
 ಅಣಿಯಾಗುವ ಸಂಧ್ಯಾಕಾಲವಿದು..
ಬನ್ನಿ ಎಲ್ಲ ಸೇರಿ ನಲಿಯೋಣ ಕೊನೆಗೊಮ್ಮೆ
ನೆನಪುಗಳ ನಕ್ಷೆಯನು ಅಚ್ಚಳಿಯದಂತೆ ಮುದ್ರಿಸೋಣ..... ಎಲ್ಲರೆದೆಯಲಿ...
ಹೊಸದಿ ಕಾಲ, ಹೊಸ ಕನಸಿನೆಡೆಗೆ
ಹಸಿರಾಗಿರಲಿ ಎಂದು ಹಾರೈಸುತ್ತಾ...
ನಿಮ್ಮ...

        --------ರಘುರಾಮ್ ಜೋಶಿ 

ಹುಟ್ಟು ಹಬ್ಬಕ್ಕೆ ಹೀಗೊಂದು ಹಾರೈಕೆ..ಮನಸಿನಾ ಕನಸ ಸಾಗರದಿ
 ನೋವಿನಾ ಅಲೆಗಳೆಷ್ಟೇ ಇರಲಿ...
ಇರುವಷ್ಟು ದಿನ ಸ್ವಚ್ಚಂದವಾಗಿ ಹಾರಡುತ್ತಾ...
ಬೆಳಕಿನಾ ನಗುವಿನೊಂದಿಗೆ
'ಮತ್ತೆ ಹುಟ್ಟಿ ಬಂದಿದ್ದೇನೆ' ಎಂದು
ಜಗಕೆ ಕೂಗಿ ಸಾರುವ ದಿನವಿದು..
ಹೊಸ ಜೀವನದೊಡನೆ....
ಹೊಸ ಜೀವನದಿಯಲ್ಲಿ ಈಜಾಡುತ್ತಾ...
ಹೊಸ ಸಾಗರವ ಸೇರಲು...
ಈ ದಿನ ಬಾಳಲಿ ಹೀಗೆ ಇರಲೆಂದು ಹಾರೈಸುತ್ತಾ....

ಹುಟ್ಟಿದ ಹಬ್ಬದ ಶುಭಾಶಯಗಳು....

                                                                                                              --------ರಘುರಾಮ್ ಜೋಶಿ

ಕಣ್ಣಿರಾದವಳು...


ಮರೆಯಬೇಕೆಂದರೂ ಮರೆಯಲಾರದವಳು..
ಮರೆಯಬೇಕೆಂದುಕೊಂಡಾಗೆಲ್ಲ ಕಣ್ಣೀರಾದವಳು...
ಮನದ ಹೊಲದಲಿ ಪ್ರೀತಿಯ ಆಸೆ ಬಿತ್ತವಳು...
ಮಳೆಯ ಕಾಯುವಿಕೆಯಲ್ಲಿ ಹೃದಯವೇ ಬರಡಾಗಲು...
ಮಸಣವಾಗಿದೆ ಭುವಿಯು.
ಮಳೆಯ ಹೊಸಗನಸು ಬರುವುದೆಂದೋ....... !!!??

--------ರಘುರಾಮ್ ಜೋಶಿ

Tuesday, February 5, 2013

ಒಂದು ನಗುವಿನಾ ಕಥೆ...ಇಬ್ಬನಿಯಂಥಾ ಕಣ್ಣೀರು..
ಅತ್ತು ಅತ್ತು ಬಿದ್ದಿತೊಂದು ಹೂವಿನಾ ಮೇಲೆ.
ಮುಂಜಾವಿತ್ತು.. ಹೂವು ನಗುವಾಗ ಚಂದವಿತ್ತು.
ಸಿಹಿಯ ಇಬ್ಬನಿಯನು ಕಂಡ ಹೂವು
ಮೊದಲ ಬಾರಿ ಉಪ್ಪಿನಾ ಹನಿಯ ನೋಡಿತ್ತು..

ಹೊಸ ಮಾತುಕತೆ ಶುರುವಾಗಿತ್ತು.
ಹೊಸದೊಂದು ಲೋಕ ನೋಡಿದಂತಾಗಿತ್ತು ಆ ಹೂವಿಗೆ..
ಹೂವು ಅದನ್ನು ಸಿಹಿಯನ್ನಾಗಿಸಲು ಪ್ರಯತ್ನಿಸಿತ್ತು..
ಎಷ್ಟು ಹೇಳಿದರೂ ಆಡಿದರೂ
ಅದು ಕಣ್ಣೀರಲ್ವ... ಅದರ ಉಪ್ಪಿನಾ ಗುಣ ಮರೆವುದೇ..?
ಕೊನೆಗೊಮ್ಮೆ ಆ ಹನಿಯು "ಉಪ್ಪಿನಂತಾ ಪಿಸುಮಾತು" ಹೇಳಿತ್ತು ಆ ಹೂವಿಗೆ.
ಅದು ಎಷ್ಟಾದರೂ ಕಣ್ಣೀರಲ್ಲವೇ ಹ್ಹಾ..
ಆ ಕಣ್ಣೀರು ನೋವಿನ ಭಾವದಿಂದಾದದ್ದಲ್ವ..
       ಭಾರವೆಲ್ಲಾ ಕಳೆದಿತ್ತು..
ಕೊನೆಗೊಮ್ಮೆ ಗಾಳಿಗೆ, ಶಾಖಕ್ಕೆ ಆರಿಹೊಗಿತ್ತು..

ಆದರೆ ಹೂವು ಏಕೋ ಭಾರವಾಗಿತ್ತು ಆ ಮಾತಿನಿಂದ..
ಸಂಜೆಯಾದೊಡೆ ಹೂವಿಗೆಕೋ ಅನಿಸಿತ್ತು..
ಈ ಸೂರ್ಯನ ಮಾಯದಂಥಾ ಬೆಳಕು ಸರಿದ ಮೇಲೆ ಬಣ್ಣವಿಲ್ಲದಾ ಕತ್ತಲಲ್ಲೇನ ನಾ ಮಾಡಲಿ ಎಂದು..
ಯಾರಿಗಾಗಿ ಇರಲೆಂದು ಕೊರಗಿತ್ತು..

ಅಲ್ಲಿ ಬೆಳಕು ಮಾಯವಾಗಿತ್ತು..
ಇಲ್ಲಿ ಅದಾಗಲೇ ಹೂವು ಮುದುಡಿತ್ತು...
ಆ ಕಣ್ಣೀರ ಹನಿ ಅದೆನೆಂದಿತ್ತೋ...?
ಈ ಹೂವು ಅದೇನು ಯೋಚಿಸಿತ್ತೋ..?

ಅವುಗಳು ದೂರವಾದವೇಕೋ ಕಾರಣ ಕಣ್ಮರೆಯಾಗಿತ್ತು..
ನೋವು ಮಾತ್ರ ಮುಗಿಯದಾಗಿತ್ತು..

ಒಟ್ಟಿನಲ್ಲಿ ಕಣ್ಣೀರು ಹೂವನ್ನು ನೊವಿನ ಮನಸ್ಸಿಂದ ಕೊಂದಿತ್ತು.. ತನ್ನನ್ನು ತಾನೇ ಮರೆತು ಕೊಂದುಕೊಂಡಿತ್ತು...
ಅಲ್ಲಿಗೆ ಒಂದು ಕಥೆ ಯಾರಿಗೂ ಕಾಣದಂತೆ, ಕೇಳದಂತೆ ಸಮಾಪ್ತಿಯಾಗಿತ್ತು...

ಮತ್ತದೇ ಸೂರ್ಯ.. ಮತ್ತದೇ ಬೆಳಕು.. ಇನ್ನೊಂದು ಹೂವು..
ಮತ್ತೊಂದು ಕಥೆ.. ಹೀಗೆಯೇ ಮುಗಿಯದಾ ಕವನದ ಭಾವಗಳು..

ಕಾಲಚಕ್ರವಿದು... ಚಕ್ರದಂತೆ ಮತೆ ಮತ್ತೆ ತಿರುಗಿದರೆ ಮಾತ್ರ ಚೆಂದ..
ನಿಂತರೆ ಪಯಣವಾದೀತೇ ಬದುಕು..?
ಗಿಡದಲ್ಲಿ ಹೊಸ ಹೊಸ ಕಥೆ ಮತ್ತೆ ಮತ್ತೆ ಮೂಡುತ್ತವೆ..
ಏನಿದೀ ಕಥೆ..? ಮಗುವಿನಂಥ ಮನದ ಕುತೂಹಲದೊಡನೆ ಕೇಳುತಾ, ನೋಡುತಾ ಸಾಗು ನೀ..

ಒಂದು ದಿನ ಸಂಪೂರ್ಣ ನಿನ್ನದಾಗುತ್ತದೆ...
ಆ ದಿನ ನಗುತಿರು ನೀ ಕೊನೆಯ ಬಾರಿ...

THE END... ..... ಹಃಹ್ಹಹ್ಹ... ಇನ್ನೂ ಇದೆ...


----------- ರಘುರಾಮ್ ಜೋಶಿ ---------------

Thursday, January 31, 2013

ಕವಿತೆಯ ಕೊನೆಯಲಿ..ಕವಿತೆಯ ಕೊನೆಯಲಿ ಹೃದಯದ ಮಾತಿದು
ದಾರಿಯ ನೆನಪಲಿ ನೆನೆದಿದೆ ಹೃದಯವು...

ಹಸಿರು ಬಣ್ಣದ ಭುವಿ
ಒಣಗಿ ಹೋಗಲು ಈಗ
ಜಿನುಗು ಮಳೆಯು ಮೂಡಿದೆ...

ಆಗಸದೀ..
ನೋವಿನ ಸಾವಿರ ಕತೆಯಾ
ಕಣ್ಣೀರು ಒಂದೆಡೆ ಸೇರಿಯೇ
ಭುವಿಯ ಅಳಲು ನೀಗಿದೆ....

ಈ ಕಣ್ಣಲ್ಲಿ ಕಾಣದ ಭಾವದಾ..
ಕಣ್ಣೀರ ಧಾರೆಯು ಖುಷಿಯ ಕಡಲಿಗಾಗಿಯೋ?.. ನೋವಿನ ನಂಟಿನಿಂದಾಗಿಯೋ?
ಮೌನವೊಂದು ಸ್ಥಿರವಾಗಿದೆ..
ಹೃದಯವು ಕೊನೆಗೊಮ್ಮೆ ಹಾಡಿದೆ..
ಇನ್ನೂ ಇದೆ... ಈ ಬಾಳು ನಿನಗಾಗಿದೆ...

Feel it.... Just breath it... Don't ever run from it. Face it.No matter what happens. Its ur destiny just keep walking.. 

----------------- ರಘುರಾಮ್ ಜೋಶಿ ---------------