Hey friends .... ಇದು "ROCK STAR" ಚಿತ್ರದ "Aur ho" ಹಾಡಿನ tune ಗೆ ಕನ್ನಡದಲ್ಲಿ ಸಾಹಿತ್ಯ ಬರ್ದಿದೀನಿ ....
ನನ್ನ ಬದುಕಿನ ಈ ಬಯಲಲಿ....
ಹಾಗೇ ಸುಮ್ಮನೆ ಕೇಳಿದೆ...
ನಾ ಕೂಗಿ ಕರೆದ ಸ್ವರ ಕೇಳೀತೆ...?
ಕಣ್ಣ ಬಿಂದು ಬಂದು ಏನಂದಿತೇ...?
ಬೇಕಾದ ನೆನಪೆಲ್ಲ ನಕ್ಕಿತು.. ಅತ್ತಿತು..
ಈ ಕ್ಷಣದಲಿ ನಾನೇನಾದೇ...?(2)
ಈ ಕ್ಷಣದಲಿ ನಾನೇನಾದೇ... ಕೇಳಿತು ಮನ ಕೇಳಿತು...
ಸೆಳೆತವು ಸೆಳೆತವು.. ಉಸಿರಿನ ಬಡಿತವು ಹೃದಯವು ಚೀರುತಿದೆ (2)
ಸೆಳೆತವು ಸೆಳೆತವು.. ಉಸಿರಿನ ಬಡಿತವು..... ಕೇಳಿತು ಏಕೆಂದೂ..
ನಿನ್ನ ಬದುಕಿನ ಗುರಿಯನು ತಿಳಿಯೇನು... ಈಗಲೇ || ||
ಮನ ನಿನ್ನದು ನೀ ತಿಳಿದುಕೋ...
ಅದು ನಿನ್ನದು ತಿಳಿ ಹೇಳಿಕೋ....
ಈ ಕ್ಷಣದಲಿ ನೀನೇನಾಗಿರುವೇ...?
ಈ ಕ್ಷಣದಲಿ ನೀನೇನಾಗಿರುವೇ.. ನೀ ನೋಡಿಕೋ ನಿನ್ನ ಬಿಂಬವ
ಜಾರಿದೆ ಜಾರಿದೆ ಕಣ್ಣಿನ ಹನಿಯಿದು ನಿಲ್ಲದೇ ಸರಿಯುತಿದೆ.. (2)
ನೋವಿನ ಮುಳ್ಳಲಿ ಹೃದಯವು ಒಡೆದಿದೆ... ಕೂಡಲು ಬರಬಹುದೇ...
ನಾ ಕಡಲಲಿ ದಾರಿಯ ಹುಡುಕುತ ಹೊರಟಿರುವೇ.... ರಕ್ಷಿಸೋ ಹರಿಯೇ.
ನಾ ಕಟ್ಟಿದ ಕನಸು ಗಾಳಿಗೆ ತೂರುತಿದೆ... ಕನಸೇನಾ ಇದುವೇ....
ಓ ಹೃದಯವೇ ನೀ ಕುಳಿತಿಹೆ ಓಡು ಓಡು ಈಗ ಕನಸೊಡನೆ
ಬದುಕಿದು ಬದುಕಿದು ನೊವಿನ ಸಾಲಿದು ನಕ್ಕರೆ ನೀ ಗೆಲುವೇ... (2)
ನೀನೆಂದೂ ನಗು, ಕಾರ್ಮೋಡ ಇದು..
ಬಿಸಿ ಗಾಳಿ ಬೀಸಲು.. ನೀ ಉಸಿರಾಡು..
ನಡಿತಾನೇ ಇರು.. ಬಿರುಗಾಳಿಯಾದರೂ..
ಕನಸೊಡನೆ.. ಸಹನೆಯಲಿ.. ಬರಡಿರುವಾ ಭೂಮಿಯೊಡನೆ..
ಅಬ್ಬರಿಸಿ.... ಸಿಡಿ ಸಿಡಿ ಸಿಡಿಲಿದು ಬೆಳಗಿದೆಯೋ..
ಹನಿ-ದನಿ ಮೊಳಗಲು ಚಿಗುರಿಹುದೋ..
ನನ್ನ ಬದುಕಿನ ಈ ಬಯಲಲಿ..
ನನ್ನ ಬದುಕಿನ ಈ ಬಯಲಲಿ ..||
-----by ರಘುರಾಮ್ ಜೋಶಿ
Good job...
ReplyDelete