
ಬೇಡದಾ ಬಯಕೆ ಬೆಳೆಯುತಿರಲು..
ಬದುಕಲೇಕೆ ಬಟಾಬಯಲಲಿ...
ಬೇಯಲೇಕೇ ಬಿಸಿಲ ಬೇಗೆಯಲ್ಲಿ...
ಬಣ್ಣದಾ ಬಾನಿನಲ್ಲಿ... ಬೆನ್ನತ್ತಿದಾ ಬಿಂದುವಂತಾಗುವಾ ಬದಲು...
ಬಿತ್ತಿ ಬೆಳೆಯಬಾರದೇಕೆ ಪ್ರೀತಿಯಾ ಬಳ್ಳಿ...
-----by ರಘುರಾಮ್ ಜೋಶಿ


ನನ್ನ ಮನಸು ಎಲ್ಲೊ ಇದೆ..
ಮನಸ ಮಾತು ಇನ್ನೊಂದಿದೆ...
ಸ್ವಲ್ಪ ಕೇಳು ನೀ ಇಲ್ಲಿಯೇ...
ಸ್ವಲ್ಪ ಜಾಸ್ತಿ ಆಗಿಲ್ಲವೇ...
ಕನಸ ಬಿಟ್ಟು ಹಾರಿ ಹೋಗಿದೆ..
ನನ್ನ ಹೃದಯದಲೀಗ ಜ್ವಾಲೆ ಹೊತ್ತಿದೆ ||
ಈ ಪ್ರೀತಿಯು ಕಣ್ಣಂಚಲ್ಲಿ ಕಣ್ಣ ಹನಿಯಾಗಿ ಬಿದ್ದಂತಿದೆ...
ನನ್ನ ಕನಸಲ್ಲಿ, ಆ ರಾತ್ರೀಲಿ ನಿನ್ನ ಬಿಂಬ ನೀರಲ್ಲಿ ಮುದ್ದಾಗಿ ಕಂಡಂತಿದೆ...
ಒಂದು ಮೌನ ಬರೆದ ಸಿಹಿಯಾದ ಪ್ರೇಮ ಬೆಳದಿಂಗಳಾ ಬೆಳಕಲಿ ತಂಪಾದ ಗಾನ..
ಹಸಿರಿನೆಲೆಯ ಮೇಲೆ ನಿದ್ರಿಸಿರುವ ಆ ಪುಟ್ಟ ನೀರ ಹನಿಗಳೇನಾ ನೀ..ಕೆಸುವಿನೆಲೆಯ ಮೇಲೆ ಆಡ್ವಾ ಹನಿಗಳೇನಾ ನೀ ...
ಬೆಳಕಿನಾ ಕಿರಣ ನಾನಾಗಲು...ಗರಿಯ ಕೆದರಿ ಕರೆವ ನಾನು ಬರವ ಕಳೆವ ಮೋಡದಂತೆ,
ಮುತ್ತನೀವ ದೇವತೆಯಾ ನೀ....ಆ ಅದ್ಭುತ ಸೌಂದರ್ಯವೇನಾ ನೀ....ಬಿಡಲಾರೆ ಉಸಿರಾ ಸನಿಹಾನೆ ಸುಳಿವ ಸುಳಿಗಾಳಿಯಾಗಿ ,
ನೀ ಸ್ಪೂರ್ತಿಯಾಗುವವರೆಗೆ ....ಬಿಡಲಾರೆ ಉಸಿರಾ ||ಹಸಿವನ್ನೇ ಸವಿವಾ ಮನಸಿಗೆ ಸಿಗುವಾ,
ನೋವ ಮರೆಸಿ ನಗಿಸಿ ಕುಣಿಸೋ ಮಳೆಯಾಗಬಾರದಾ......ನಿನಗೊಮ್ಮೆ ಮನಸಾಗಬಾರದಾ....ವೀಣೆ ನುಡಿಸೋ ತಂತಿಯಾಗಿ ಸ್ವರದ ದನಿಯ ಕೇಳಿ ಬರುವ
ಖುಷಿಯ ಅಲೆಗಳಂತೆ ನಾವಿಬ್ಬರಾಗಬಾರದೆಕೇ...........ನೀ ಸ್ವಲ್ಪ ಕೇಳಬಾರದೇಕೆ.....ಕಣ್ಣ ರೆಪ್ಪೆಯ ಕಷ್ಟ ಕಂಡು ಕಣ್ಣ ಕಂಬನಿ ಒರೆಸಲೆಂದು
ಕೈಯನಿತ್ತ ಹೃದಯ ನನ್ನದು...ಸರಿಯಾಗಿ ನೊಡಿಕೋಳ್ತಿಯಾ ಈ ಎನ್ನ ಹೃದಯವ!!..... || ||
---ರಘುರಾಮ್ ಜೋಶಿ---
ಎಲ್ಲೆಲ್ಲೂ ಪ್ರೇಮ..ನುಡಿದಿದೆ ಈ ಹೃದಯ ಜಗವ ನೋಡಿ...
ಎನ್ನ ಕಾಲು ನಿಲ್ಲುತಿಲ್ಲ...
ನಿಲ್ಲು ಎಂದರೂ ಕೇಳುತಿಲ್ಲ...
ಚಿಟ್ಟೆ ಹಾಗೆ ರೆಕ್ಕೆ ಬಲಿತು ಚಿಟಿಪಿಟಿ ಎಂದು ಹಾರಿ
ಸಾವಿರಾರು ರಂಗು ಚೆಲ್ಲಿ ಜಗಕೆ ಹರಡಿಹುದು....ಜಗವ ತಿರುಗಿಹುದು...
ಇದು ಪ್ರೇಮ... ಇದುವೇ ಪ್ರೇಮ....
ಕಡಲಲೆಯ ರಸಬಡಿತಗಳ ಬಹುದಾನಂದ..... ಆ ದಡಕಲ್ಲವೇ....
ಮರಗಿಡದ ಹೂವುಹಣ್ಣುಗಳ ಆ ಸಿಹಿಒಲವು ..... ಜೀವನಾಡಿಯದಲ್ಲವೆ....
ಸಿರಿತನದ ತೊರೆನದಿಗಳಂತೆ ಸಾಗರವ ಸೇರಿಹುದು...
ನೋಟದಲೆ ಸ್ವಲ್ಪ ಮಾತಾಡಿ...
ಹರಿದಾಡುವಾ.. ಮನವ ಹಿಡಿದೆಳೆವ
ವರವಾಗಿ ಕಣ್ಣಲ್ಲಿ ಕನಸಾಗಿ ...ದಿನವಿಡೀ ನಿದ್ದೆಯೇಲ್ಲಿ...
ನಿದ್ದೆ ಕದ್ದ ಚೊರನೇಲ್ಲಿ?...
ಜ್ವರವಿರಲು ಇದು ಜೊತೆಗಿರಲು ..
ಯಾರು ಏನೆಂದರೂ ಕೇಳುವುದಿಲ್ಲವೋ....
ತರಗೆಲೆಯಾ ಹಾಗೆ ಉದುರಿದರೂ..
ಚಿಗುರೆಲೆಯಲಿ ಹೊಸ ನಾಂದಿಯಾಗಿಲ್ಲವೇ ....ಇದು ಕರಗುವುದಲ್ಲವೋ..
ಸಿಗದಿರಲು.. ಒಂದಾಗದಿದ್ದರೂ ಇದು ಕೊರಗುತ ...ಕುರುವುದಿಲ್ಲವೋ..
ಇರುವರೆಗೂ ಕೊನೆ ಉಸಿರಿರಲು ಅದು ..
ನಗುನಗಲು ಸಾವೇ ಹೆದರಿಹುದೇ....
ಯಾರ್‍ಯಾರೋ ಎಲ್ಲೆಲ್ಲೋ ಸಿಕ್ಕಿರಲು ...
ಮತ್ತೆಲ್ಲೊ.. ಇನ್ನೆಲ್ಲೊ.. ಕಳೆದಿರಲು...
ಮುಂದೆಲ್ಲೊ ಕಾಯ್ದಿಡುವ ಸಿಹಿಯಾ ನೆನಪುಗಳಿದು...
ಮರೆಯಬೇಡವೆ... ||
ಇದು ಪ್ರೇಮ ...ಸಾವೇ ಇರದ...
ಕಡಲೊಳಗಡೆ ಕಾಣೋ ನೀಲಿ ಬಣ್ಣ!..
ಬಾನು ಬಾಗೋ ಭುವಿಯ ತಾಗೋ..
ಆ ತುದಿಯ.... ಕೊನೆಯ ಹಾಗೇ..
ಇದುವೇ...
ಮಳೆಯಹನಿಯು ಭುವಿಯಲರಳಿ ಪುಟ್ಟ ಹೆಜ್ಜೆ ಇಟ್ಟು ನಡೆಯೋ... ಕ್ಷಣದ ಹಾಗೇ....
ಇದುವೇ...
ಮನದ ಹೃದಯದಿ ಗೆಜ್ಜೆ ಕಟ್ಟಿ ...
ಕುಣಿದು ತಾಳದಿ ನಲಿವ ಬಣ್ಣದಿ..
ತಂಪು ಗಾಳಿ ಕಂಪ ಸೂಸಿ.. ಬಣ್ಣವೆಲ್ಲ ಜಗದಿ ಹರಡಲು...
ಇದು ಕೊನೆಯಿರದಾ ಪ್ರೇಮ...
ಇದುವೆ.. ಕೊನೆತನಕ ಪ್ರೀತಿಸೊ ಪ್ರೇಮ || ||
---ರಘುರಾಮ್ ಜೋಶಿ---