Monday, January 27, 2014

ಅನರ್ಥ ಮಂಥನವು ಪ್ರೀತಿಯ ಕಡಗೋಲಲಿ...




ದೂರದಿಂದದೋ ಬೀಸಿ ಬಂದಿದೆ ಕಡಲಿನಂಥಾ ಪವನವು..
ಭಾವ ಸಾಗರಕಿಳಿಸಿ ನಕ್ಕಿದೀ ಕಾಲವು ಪ್ರೀತಿ ಕಡಗೋಲು ಹಿಡಿದು..
ಮನದ ಭುವಿಯಲಿ ಭೋರ್ಗರೆವಾ ನಾದವೂ..
ಸಿಕ್ಕಿ ಸತ್ತಿಹೆ ಸುಖದ ಜೀವವು ಭಾವದಾ ತಳಹದಿಯಲ್ಲಿ...
ಅತ್ತ ನೆನಪೂ ಇತ್ತ ಕನಸೂ... ಅತ್ತ ನಗುವೂ ಇತ್ತ ನೋವೂ..
ಎಳೆದು ಆಡಲು ಮಗುವಿನಂತೆ ಕಾಲವು.. ಪೋಷಕರಂತೆ ದೈವವು..
ಮಿಂಚಿ ಗುಡುಗಿದೆ ಹೆಪ್ಪುಗಟ್ಟಿದೀ ಕಾರ್ಮೊಡವು.. ರಕ್ಕಸನಂತೆ ಕಗ್ಗತ್ತಲಾಗಿದೀ ಆಗಸವು...
ಒಮ್ಮೆ ಅಶ್ವವು, ಒಮ್ಮೆ ತರುಣಿಯೂ.. ಒಮ್ಮೆ ವಿಷವೂ..
ಕೊನೆಗೂ ಉದ್ಭವಿಸುವುದೊಂದು ಘೋರ ವಿಷವು ಪ್ರೀತಿ ಕಡಗೋಲ ಕಡೆದು ಕಡೆದು.. ಅಮೃತದ ಆಸೆಯಲ್ಲಿ...

ಹೌಹಾರಿದರೇನು ಬಂತು!!.. ತಾಂಡವ ಶಿವನಂತೆ ವಿಷವ ಕುಡಿದುಬಿಡು... ಕುಡಿದು ಸಹಿಸಿಬಿಡು.. ನಕ್ಕು ನಮ್ಮ ಜಗವ ಉಳಿಸಿಬಿಡು...

ಕೊನೆಗೂ ಬರುವುದೊಂದು ಅಮೃತ ಘಳಿಗೆಯೊಂದು ಒಡೆದು ಹಂಚುವುದದು ನಗುತ ಬಾಳಲಿ ಮೊಸದಿ...

ಪ್ರೀತಿಯ ಕಡಗೋಲು  ಸೃಷ್ಟಿಸಿತೇನೆಂಬುದನ್ನೊಮ್ಮೆ ತಿರುಗಿ ನೋಡಿದರಾಗ ಅವಾಂತರವು... ಇದುವೆ ನಿರಂತರವು..
ಮೊದಲು ಕಡಗೋಲ ಹುದುಗಿಸಬೇಕು... ಬೇಡವೀ ವ್ಯರ್ಥ ಮಂಥನವು... ಇದುವೆ ಅನರ್ಥ ಮಂಥನವು ಪ್ರೀತಿಯಾ ಕಡಗೊಲಿದು...

------- ರಘುರಾಮ್ ಜೋಶಿ ---


Friday, January 24, 2014

ಪ್ರೀತಿಯ ಹೂ ಮಾಲೆ..




ಆಸೆಯಿಂದ ಪ್ರೀತಿಯಾ ಹೂಗಳ ಪೊಣಿಸಿ ಮಾಲೆ ಮಾಡಿ ಮುಡಿದಿಹೆ...
ಹಗಲಲಿ ನಗುತಿರಲು ಎನ್ನೊಡನೆ ಇರುಳಿಗೆ ಹೆದರಿ ಬಾಡಿದೆ...
ಹೂಗಳೇ ಬಾಡಿದ ಮೇಲೆ ಆಸೆಗೆಲ್ಲಿಯ ಜೀವವು...
ನೆನಪಿಗೆಂದು ಬಾಡಿದ ಹೂ ಜೊತೆಗಿದ್ದೀತೇ?...
ತಿಪ್ಪೆಯ ಸೇರಿದೆ ಎನ್ನಾಸೆಯಾ ಪ್ರೀತಿಯೊಡನೆ ಮನವ ಹರಿದು...
ಹೊಸ ದಿನವು ಹೊಸ ಹೂಗಳು ಇದುವೆ ಜೀವನ ಚಕ್ರವು.

------ ರಘುರಾಮ್ ಜೋಶಿ---






ಆರದ ಪುಟ್ಟ ಪ್ರೀತಿಯಾ ದೀಪ..




ದೀಪದ ಸುತ್ತ ಕೈ ಹಿಡಿಯುವೆ... ದೀಪವೆ ಸುಟ್ಟರೆ ನ್ಯಾಯವೇ...
ಇದು ಚಳಿಯು.. ಬೀಸಿ ಬರುವಾ ಗಾಳಿಯು.. 
ಉರಿಯಲೇ ಬೇಕು ಎನ್ನ ಪ್ರೀತಿಯ ದೀಪವು.. ನಾ ಹಚ್ಚಿದಾ ದೀಪವು..
ಇತ್ತರೆ ಚಳಿಗೆ ಬೆಚ್ಚನೆಯ ಶಾಖ ಇಲ್ಲದಿರೆ ಕೈ ಸುಟ್ಟ ಗಾಯ..
ಕೈ ಸರಿದರೆ ಪ್ರೀತಿಯಾ ದೀಪ ಆರಿ, ಎನ್ನ ಜಗವು ಕತ್ತಲಾದೀತೆಂಬ ಭಯವು ಸದಾ..
ಸುಟ್ಟರೂ ಅದು ಎನ್ನ ಪ್ರೀತಿಯ, ಪುಟ್ಟ ಬೆಳಕು ತಂದ ದೀಪವು.. ಆರಲು ಬಿಡುವೆನೇ ನಾ.. 
ಸುಟ್ಟರೂ ಆ ನೋವು ಎನಗಿರಲಿ.. ಬೆಳಕು ನಿರಂತರ ಉರಿಯಲಿ... 

--------- ರಘುರಾಮ್ ಜೋಶಿ---------- 

Thursday, October 17, 2013

ನಿನ್ನ ನೆನಪಲಿ ಸದಾ....



ಚಂದಿರ ತಂದ ದಿಂಬಿದು, ನಿನ್ನ ನೆನಪು ಸದಾ....
ದಾರಿಯ ನೆರಳು ನಿನ್ನಯ, ಮಾತು ಸದಾ....
ನಾ ನಿನ್ನವನು... ಅದುವೆ ನಿಜಾ...
ನೀ ಹೂವಾದರೆ ನಾ.. ಸಿಹಿಯು ಸದಾ....

ಕಣ್ಣ ಬಿಂಬದಿ ನೀನೇ ಕಾಣುವೆ ನನ್ನ ನಾ ನೊಡಿದರೂ....
ರೋಗವಾಗಲು ನಿನ್ನಯ ಪ್ರೀತಿಯು ಔಷಧಿಯೇ ನೀನಾದೆ...
ಆದೆ ನೀನು ರಾಗವೀಗ ನನ್ನ ಕವನಕೆ...
ನೌಕೆಯಲಿ ಹಾಯಿಯಾಗಿಹೆ ಗಾಳಿಯೇ ನೀನಾಗಿರಲು...
ನಿನ್ನ ಪ್ರೀತಿಯ ದಿಕ್ಕಿನೆಡೆಗೆ ಎನ್ನ ಈ ಜೀವನವು....

ನಿನ್ನ ಪ್ರೀತಿಯ ಕನ್ನಡಿ ನಾ..
ಎಷ್ಟು ನುಲಿದರೂ ಸಾಲದು ದೃಷ್ಠಿಯು..
ನೀನು ಹೇಗೋ, ನಾನೂ ಹಾಗೆಯೇ...

ನಿನ್ನಯ ಪ್ರೀತಿಯಾ ಅಳು ನಗುವಿನಾ ಮೌನ ಮಾತಾದಾಗ ಪ್ರತಿಬಿಂಬ ನಾನಾಗಿಹೆ...
ನೀನು ಹೇಗೋ, ನಾನೂ ಹಾಗೆಯೇ...

ಹೇಗೆ ತಾನೆ ಅಡಗಿಸಿಟ್ಟಿಹೆ ನಿನ್ನ ಸ್ಪರ್ಶದಿ ಮಿಂಚಿನಾ ಆ ಸಂಚಾರವ...
ರವಿಯು ಮುಳುಗಿ ಹೊದರೂನು ನಿನ್ನ ಕಿರಣವು ಬೆಳಗಿದೆ ಎನ್ನೆದೆಯಲಿ...
ಇನ್ನೆಷ್ಟು ಹುಣ್ಣಿಮೆಯ ಕಾಯಬೇಕೇ ತುಂಟ ನಲ್ಲೇ??..
ಮನದಿ ನಿನ್ನಯ ಶ್ರಾವಣ ಬರಲು....
ಮನದ ಬರಡಲಿ ಹಸಿರು ಮೂಡಲು...

-----------ರಘುರಾಮ್ ಜೋಶಿ---

Tuesday, September 17, 2013

ನೆನಪಿನಾ ನೌಕೆ....


(ಗೆಳೆಯರ ಬೀಳ್ಕೊಡುಗೆಯ ಸಮಯದಲ್ಲಿ ಬರೆದ ಸಾಲುಗಲು)

ನೆನಪಿನಾ ನೌಕೆಯಿದು ಕನಸಿನಾ ಕಡೆಗೆ...
ಕಹಿಯಾಗಿಹ ಮನಗಳು ಸಿಹಿಯಾಗಲಿ..
ಸಿಹಿಯಾದ ನೆನಪುಗಳು ಸಿರಿಯಾಗಲಿ..
ಕಡಲಿನಾ ಬದುಕಿದು ಭಾವಗಳು...

ಅಗಲಿಕೆಯ ನೆಪದಲ್ಲಿ ಹೊಸ ದಿಕ್ಕಿನೆಡೆಗೆ
 ಅಣಿಯಾಗುವ ಸಂಧ್ಯಾಕಾಲವಿದು..
ಬನ್ನಿ ಎಲ್ಲ ಸೇರಿ ನಲಿಯೋಣ ಕೊನೆಗೊಮ್ಮೆ
ನೆನಪುಗಳ ನಕ್ಷೆಯನು ಅಚ್ಚಳಿಯದಂತೆ ಮುದ್ರಿಸೋಣ..... ಎಲ್ಲರೆದೆಯಲಿ...
ಹೊಸದಿ ಕಾಲ, ಹೊಸ ಕನಸಿನೆಡೆಗೆ
ಹಸಿರಾಗಿರಲಿ ಎಂದು ಹಾರೈಸುತ್ತಾ...
ನಿಮ್ಮ...

        --------ರಘುರಾಮ್ ಜೋಶಿ 

ಹುಟ್ಟು ಹಬ್ಬಕ್ಕೆ ಹೀಗೊಂದು ಹಾರೈಕೆ..



ಮನಸಿನಾ ಕನಸ ಸಾಗರದಿ
 ನೋವಿನಾ ಅಲೆಗಳೆಷ್ಟೇ ಇರಲಿ...
ಇರುವಷ್ಟು ದಿನ ಸ್ವಚ್ಚಂದವಾಗಿ ಹಾರಡುತ್ತಾ...
ಬೆಳಕಿನಾ ನಗುವಿನೊಂದಿಗೆ
'ಮತ್ತೆ ಹುಟ್ಟಿ ಬಂದಿದ್ದೇನೆ' ಎಂದು
ಜಗಕೆ ಕೂಗಿ ಸಾರುವ ದಿನವಿದು..
ಹೊಸ ಜೀವನದೊಡನೆ....
ಹೊಸ ಜೀವನದಿಯಲ್ಲಿ ಈಜಾಡುತ್ತಾ...
ಹೊಸ ಸಾಗರವ ಸೇರಲು...
ಈ ದಿನ ಬಾಳಲಿ ಹೀಗೆ ಇರಲೆಂದು ಹಾರೈಸುತ್ತಾ....

ಹುಟ್ಟಿದ ಹಬ್ಬದ ಶುಭಾಶಯಗಳು....

                                                                                                              --------ರಘುರಾಮ್ ಜೋಶಿ

ಕಣ್ಣಿರಾದವಳು...


ಮರೆಯಬೇಕೆಂದರೂ ಮರೆಯಲಾರದವಳು..
ಮರೆಯಬೇಕೆಂದುಕೊಂಡಾಗೆಲ್ಲ ಕಣ್ಣೀರಾದವಳು...
ಮನದ ಹೊಲದಲಿ ಪ್ರೀತಿಯ ಆಸೆ ಬಿತ್ತವಳು...
ಮಳೆಯ ಕಾಯುವಿಕೆಯಲ್ಲಿ ಹೃದಯವೇ ಬರಡಾಗಲು...
ಮಸಣವಾಗಿದೆ ಭುವಿಯು.
ಮಳೆಯ ಹೊಸಗನಸು ಬರುವುದೆಂದೋ....... !!!??

--------ರಘುರಾಮ್ ಜೋಶಿ