Monday, January 27, 2014

ಅನರ್ಥ ಮಂಥನವು ಪ್ರೀತಿಯ ಕಡಗೋಲಲಿ...




ದೂರದಿಂದದೋ ಬೀಸಿ ಬಂದಿದೆ ಕಡಲಿನಂಥಾ ಪವನವು..
ಭಾವ ಸಾಗರಕಿಳಿಸಿ ನಕ್ಕಿದೀ ಕಾಲವು ಪ್ರೀತಿ ಕಡಗೋಲು ಹಿಡಿದು..
ಮನದ ಭುವಿಯಲಿ ಭೋರ್ಗರೆವಾ ನಾದವೂ..
ಸಿಕ್ಕಿ ಸತ್ತಿಹೆ ಸುಖದ ಜೀವವು ಭಾವದಾ ತಳಹದಿಯಲ್ಲಿ...
ಅತ್ತ ನೆನಪೂ ಇತ್ತ ಕನಸೂ... ಅತ್ತ ನಗುವೂ ಇತ್ತ ನೋವೂ..
ಎಳೆದು ಆಡಲು ಮಗುವಿನಂತೆ ಕಾಲವು.. ಪೋಷಕರಂತೆ ದೈವವು..
ಮಿಂಚಿ ಗುಡುಗಿದೆ ಹೆಪ್ಪುಗಟ್ಟಿದೀ ಕಾರ್ಮೊಡವು.. ರಕ್ಕಸನಂತೆ ಕಗ್ಗತ್ತಲಾಗಿದೀ ಆಗಸವು...
ಒಮ್ಮೆ ಅಶ್ವವು, ಒಮ್ಮೆ ತರುಣಿಯೂ.. ಒಮ್ಮೆ ವಿಷವೂ..
ಕೊನೆಗೂ ಉದ್ಭವಿಸುವುದೊಂದು ಘೋರ ವಿಷವು ಪ್ರೀತಿ ಕಡಗೋಲ ಕಡೆದು ಕಡೆದು.. ಅಮೃತದ ಆಸೆಯಲ್ಲಿ...

ಹೌಹಾರಿದರೇನು ಬಂತು!!.. ತಾಂಡವ ಶಿವನಂತೆ ವಿಷವ ಕುಡಿದುಬಿಡು... ಕುಡಿದು ಸಹಿಸಿಬಿಡು.. ನಕ್ಕು ನಮ್ಮ ಜಗವ ಉಳಿಸಿಬಿಡು...

ಕೊನೆಗೂ ಬರುವುದೊಂದು ಅಮೃತ ಘಳಿಗೆಯೊಂದು ಒಡೆದು ಹಂಚುವುದದು ನಗುತ ಬಾಳಲಿ ಮೊಸದಿ...

ಪ್ರೀತಿಯ ಕಡಗೋಲು  ಸೃಷ್ಟಿಸಿತೇನೆಂಬುದನ್ನೊಮ್ಮೆ ತಿರುಗಿ ನೋಡಿದರಾಗ ಅವಾಂತರವು... ಇದುವೆ ನಿರಂತರವು..
ಮೊದಲು ಕಡಗೋಲ ಹುದುಗಿಸಬೇಕು... ಬೇಡವೀ ವ್ಯರ್ಥ ಮಂಥನವು... ಇದುವೆ ಅನರ್ಥ ಮಂಥನವು ಪ್ರೀತಿಯಾ ಕಡಗೊಲಿದು...

------- ರಘುರಾಮ್ ಜೋಶಿ ---


1 comment:

  1. ಬದುಕೇ ಅಂತು, ಅದು ಕಲ್ಪನೆಗಳಿಗೂ ಮೀರಿದ ಪಯಣ.

    ReplyDelete

Share ur feelings with me here