Thursday, October 17, 2013

ನಿನ್ನ ನೆನಪಲಿ ಸದಾ....



ಚಂದಿರ ತಂದ ದಿಂಬಿದು, ನಿನ್ನ ನೆನಪು ಸದಾ....
ದಾರಿಯ ನೆರಳು ನಿನ್ನಯ, ಮಾತು ಸದಾ....
ನಾ ನಿನ್ನವನು... ಅದುವೆ ನಿಜಾ...
ನೀ ಹೂವಾದರೆ ನಾ.. ಸಿಹಿಯು ಸದಾ....

ಕಣ್ಣ ಬಿಂಬದಿ ನೀನೇ ಕಾಣುವೆ ನನ್ನ ನಾ ನೊಡಿದರೂ....
ರೋಗವಾಗಲು ನಿನ್ನಯ ಪ್ರೀತಿಯು ಔಷಧಿಯೇ ನೀನಾದೆ...
ಆದೆ ನೀನು ರಾಗವೀಗ ನನ್ನ ಕವನಕೆ...
ನೌಕೆಯಲಿ ಹಾಯಿಯಾಗಿಹೆ ಗಾಳಿಯೇ ನೀನಾಗಿರಲು...
ನಿನ್ನ ಪ್ರೀತಿಯ ದಿಕ್ಕಿನೆಡೆಗೆ ಎನ್ನ ಈ ಜೀವನವು....

ನಿನ್ನ ಪ್ರೀತಿಯ ಕನ್ನಡಿ ನಾ..
ಎಷ್ಟು ನುಲಿದರೂ ಸಾಲದು ದೃಷ್ಠಿಯು..
ನೀನು ಹೇಗೋ, ನಾನೂ ಹಾಗೆಯೇ...

ನಿನ್ನಯ ಪ್ರೀತಿಯಾ ಅಳು ನಗುವಿನಾ ಮೌನ ಮಾತಾದಾಗ ಪ್ರತಿಬಿಂಬ ನಾನಾಗಿಹೆ...
ನೀನು ಹೇಗೋ, ನಾನೂ ಹಾಗೆಯೇ...

ಹೇಗೆ ತಾನೆ ಅಡಗಿಸಿಟ್ಟಿಹೆ ನಿನ್ನ ಸ್ಪರ್ಶದಿ ಮಿಂಚಿನಾ ಆ ಸಂಚಾರವ...
ರವಿಯು ಮುಳುಗಿ ಹೊದರೂನು ನಿನ್ನ ಕಿರಣವು ಬೆಳಗಿದೆ ಎನ್ನೆದೆಯಲಿ...
ಇನ್ನೆಷ್ಟು ಹುಣ್ಣಿಮೆಯ ಕಾಯಬೇಕೇ ತುಂಟ ನಲ್ಲೇ??..
ಮನದಿ ನಿನ್ನಯ ಶ್ರಾವಣ ಬರಲು....
ಮನದ ಬರಡಲಿ ಹಸಿರು ಮೂಡಲು...

-----------ರಘುರಾಮ್ ಜೋಶಿ---

4 comments:

  1. Nenapugale ella..nenapillade enoo illa... Kaviyavare... tumba chennagide..

    ReplyDelete
    Replies
    1. ಧನ್ಯವಾದಗಳು ನಿವೀದಿತಾ ಅವ್ರೆ....

      Delete
  2. ಕವಿಯ ನವಿರು ಭಾವವು ಓದುಗರ ಮನ ಸೆಳೆಯುವಂತಿದೆ.
    ಆದರೆ ಅಕ್ಟೋಬರ್ ನಂತರ ಪೋಸ್ಟ್ ಇಲ್ಲದಿರುವುದು ಬೇಸರ ತರಿಸಿತು.

    ReplyDelete
    Replies
    1. ಜೀವನದ ಜಂಜಾಟಕ್ಕೆ ಸಿಲುಕಿರಲು ಬದುಕು.. ಭಾವನೆಗಳು ಅಕ್ಷರವಾಗಿಲ್ಲ ದಯವಿಟ್ಟು ಕ್ಷಮಿಸಿ... ಎಷ್ಟೊ ಭಾವಗಳು ಸತ್ತೊಗಿವೆ.. ಎಷ್ಟೊ ಭಾವಗಳು ಇನ್ನೂ ಅಡಗಿ ಕುಳಿತಿದೆ.. ಎಷ್ಟೊ ಭಾವಗಳು ಜೀವನದಲ್ಲಿ ಎನ್ನ ಜೊತೆ ನಡೆಯುವ ಜನರಿಗೆ ಮೀಸಲಾಗಿದೆ... ಯಾವುದನ್ನ ಜಗತ್ತಿಗೆ ಹೇಳುವುದು ಯಾವುದನ್ನ ಬಿಡುವುದು ಒಂದೂ ತೋಚದಿರಲು ಜಡವಾಗಿದೆ ನನ್ನ ಬ್ಲೊಗ್ .... ದಯವಿಟ್ಟು ಕ್ಷಮಿಸಿ ಮಾತು ಕೊಡುವೆ ಏನೆಂದರೆ ಇನ್ನು ಮುಂದೆ ಇದನ್ನು ಒಳ್ಳೆಯ ರೀತಿಯಲ್ಲಿ ಮುಂದುವರೆಸುವೆ, ಓದುಗರನ್ನು ಬೇಸರಿಸದೆ ಸದಾ ....

      Delete

Share ur feelings with me here