ಕಣ್ಗಳಾ ಕಾಟವು ಹುಸಿನಗುವಲೆಂತೋ?...
ಮೊದಲ ಮಳೆಯು ಮರಳ ಮನದಿ,
ಘಮದ ಮತ್ತು ಮೈದುಂಬಲೆಂತೋ?...
ದುಂಬಿಯಂತೆ ದೊಂಬಿಯಿಕ್ಕಿದೆ,
ಕಂಗಳ ಹೂದೋಟದಿ ಮನವು...
ಹೊತ್ತೊಯ್ದಿದೆ ಕಂಗಳಿಂದ,
ಹೊಸದಾಗಿ ಅರಳಿದ ಹೂ ಮಕರಂದವ...
ಜೇನ ನುಡಿಗೆ ಗೂಡ ಎದೆಯಲಿ ಜುಮ್ ಜುಮ್ಮೆಂದಿದೆ ಆಸೆಯು...
ಪರಾಗ ಸ್ಪರ್ಶದಿ ಅತ್ತ ಹೂ ಹಾಡಿದೆ,
ಇತ್ತ ಸವಿಜೇನು ಕೂಡಿದೆ...
ಕೂಡಿಟ್ಟು ಕಟ್ಟಿಟ್ಟ ಜೇನ ಸವಿಯಿತ್ತ ಭಾವವು,
ಕೊಯ್ದು ಠೆಕ್ಕಿಗಳ ಪೊಟ್ಟಣಕೆ ಸೇರದಿರಲಿ ಮತ್ತೆ ಮತ್ತೆ...
ಹೊತ್ತುರಿಯದಿರಲೀ ಎಮ್ಮ ಗೂಡು...
ಮಸಣವಾಗದಿರಲೆಮ್ಮ ಗೂಡು ಕಪಟ ಕಾಲಕೆ ಸಿಲುಕಿ...
ಕೂಡಿ ಕಟ್ಟಿದ ಭಾವವು ಸೋತು ಸಾಯ್ವ ಮುನ್ನ,
ಸವಿಯು ಸೋರ್ವ ಮುನ್ನ,
ಮೊನಚು ವಿಷವ ಕುಕ್ಕದಿರದು.. ಸೆಟೆದು ನಿಲ್ಲದಿರದು ನೋವಿತ್ತವರಿಗೆ..
ಭಾವ ಜೇನಿನ ಸೌಂದರ್ಯ ಸವಿಯ ಸಲ್ಲಾಪ ಮುಗಿಯದಿರಲೆಂದೂ.. ಮುಗಿಯದಿರಲೆಂದೂ..
----------- ರಘುರಾಮ್ ಜೋಶಿ---------
ಆಶಾಭಾವದ ಕಿವಿಮಾತು ಹೇಳುವ ನಿಮ್ಮ ಈ ಕವನ ಉತ್ತಮ ನವೋದಯ ರಚನೆ.
ReplyDeleteತಮ್ಮ ಲಯದಲ್ಲಿ ಅಮಿತವಾದ lyric value ಇದೆ, ಉದಾ:
"ಜೇನ ನುಡಿಗೆ ಗೂಡ ಎದೆಯಲಿ ಜುಮ್ ಜುಮ್ಮೆಂದಿದೆ ಆಸೆಯು..."
ಎನಿದೆಯೊ ಎನಿಲ್ಲವೊ ... ನನ್ನ ಕನ್ನಡ ಶಬ್ದಗಳು ತುಂಬಾ ಸರಳ ಇದೆ ಏನೇ ಬರದ್ರು ಅಷ್ಟು ತೂಕ ಬರ್ತಾ ಇಲ್ಲ ಅನ್ನೊದು ನನ್ನ ಭಾವನೆ.... ತುಂಬ ಒಳ್ಳೆದನ್ನೆ ಹೇಳ್ತೀರಿ ನೀವು ಎಂದಿಗೂ... ಧನ್ಯವದಗಳು ತಮಗೆ...
Delete