Monday, April 28, 2014

ಮನವಿದುವೆ ಪಕ್ಕಾ ನಾಲ್ಕುನೂರಿಪ್ಪತ್ತು...








ಕನಸು ಕಂಡತಿದೆ ನಿನ್ನ ಕಣ್ಣೊಳಗೆ....
ಕರಗಿ ನೀರಾಗಿದೆ ಮನವು ನದಿಯಂತೆ...
ನಿನ್ನ ನಗುವಿನ ಬೆಳಕಿಗೆ
ನಿನ್ನ ನಗುವ ಕೀಟಲೆಗೆ....

ಕುರುಡು ಬೆಳಕಿನಾ ಚಂದ್ರ ಬಿಂಬದಂತೆ..
ನೋಡುವ ನೋಟದಲೆಂತೋ ದಿಮ್ಮೆನ್ನುವ ಮತ್ತು...
ತುಂಬುವುದು ಎನ್ಮನದಲಿ ಸುಡು ಬೇಸಿಗೆಯಲ್ಲೂ ಹಾಯ್ ಎನಿಸುವ ಬಿಸಿಯುಸಿರ ಗಮ್ಮತ್ತು...
ಏಕೋ ಎಡಗಣ್ಣು ಅದುರುತಿದೆ ಮತ್ತಿನ್ನೆನು ಕಾದಿದೆಯೊ ಈ ಹೃದಯಕೆ ಆಪತ್ತು...
ಕುಡಿನೋಟವಿದುವೆ ಪಕ್ಕಾ ನಾಲ್ಕುನೂರಿಪ್ಪತ್ತು...
ಮನದ ಆಸೆಯೀಗ ತಿರುಗುತಿದೆ ನಿನ್ನೆಡೆಗೆ, ನಾಯಿಯ ಬಾಲವಿದು ನಳಿಕೆಗೆ ಹಾಕಿದಷ್ಟೆ ಹೊತ್ತು..
ಹಳೆಯ ನೆನಪ ಗೂಡಲ್ಲಿ ಅತ್ತು ಅತ್ತು ಕಳೆದಿದೆ ತುಂಬಾ ಹೊತ್ತು..
ಇದುವೆ ನವ ಜೀವನದ ಹೊಸ ಹೊತ್ತಿಗೆಯ ಮೊದಲ ಪುಟದಿಂದ ಶುರುಮಾಡುವ ಹೊತ್ತು...

ಅಪ್ಪಿ-ತಪ್ಪಿ ಕೇಳದಿರಲೆನ್ನ ಮೂಳೆಯಿಲ್ಲದ ನಾಲಿಗೆಯು,
"ನಾನು ಆಗಸವು.. ನೀನು ಭುವಿಯು..
ಸುರಿಸುವಾ ಪ್ರೀತಿಯ ಮಳೆಯನು.. ಬಿತ್ತುವಾ ಜಗಕೆ ಹಸಿರನು..
ಇರುವೆಯಾ ಕೊನೆಯವರೆಗು ವಯಸಾಗುವವರೆಗೂ ನಮಗೆಪ್ಪತ್ತು"....

ಅಪ್ಪಿ-ತಪ್ಪಿ ಕೇಳದಿರಲೆನ್ನ ತುಂಟ ನಾಲಿಗೆಯು,
ಏಕೋ ಎಡಗಣ್ಣು ಅದುರುತಿದೆ ಮತ್ತಿನ್ನೆನು ಕಾದಿದೆಯೊ ಈ ಹೃದಯಕೆ ಆಪತ್ತು...
ಮತ್ತಿನ್ನೆನು ಕಾದಿದೆಯೊ ಈ ಹೃದಯಕೆ ಆಪತ್ತು...

---------- ರಘುರಾಮ್ ಜೋಶಿ -----------

1 comment:

Share ur feelings with me here