Sunday, December 26, 2010

ನಿನಗಾಗಿಯೇ...

ಸೋನು ನಿಗಮ್ ಹಾಡಿರುವ.. ಜಯಂತ್ ಕಾಯ್ಕಿಣಿ ರಚಿಸಿರುವ "ನೀನೆ ಬರಿ ನೀನೆ" ಪದ್ಯದ ಬದಲಾದ ಸಾಹಿತ್ಯದಲ್ಲಿ....



ನನ್ನ ಈ ಮನದ ಭಾವನೆಯೆಂಬ
ಸಾಗರವು ನೀನೇ......
ನನ್ನ ಈ ಮನದ ಗುರಿಯೆಂಬ ಆ
ಉತ್ಸಾಹ ನೀನೇ........
ನೀನೇ ಬರೀ ನೀನೇ ಆ ಅದ್ಭುತ
ಸೌಂದರ್ಯ ನೀನೇ......

ನೀನೇ.. ತನು ನೀನೇ ಅನುರಾಗದ
ಸ್ವರವೆಲ್ಲ ನೀನೇ.....||೧||

ಸಾಗರದ ಒಳಗಿರುವ ಆ ಹವಳವು
ನೀ.. ಬೇಕು ನನಗೆಂದು ಹೊರಬಂದಿದೆ....
ಏಕಾಂತದಲ್ಲಿಹ ಆ ಚಂದ್ರನು..
ಬೆಳಕಾಗಿ ಬಂದಿಹನು ನಿನಗಾಗಿಯೇ.....
ನಿನ್ನ... ಆ ಹೃದಯ ಇಲ್ಲಿದೆ.....
ನನ್ನಯ..., ಈ ತವಕ ಸ್ವರವಾಗಿ ಹೊರಹೊಮ್ಮಿದೆ...

ನಿನಗಾಗಿಯೇ... ನಿನಗಾಗಿಯೇ....||೨||

ನಿನಗಾಗಿ ನಾ ತಂದ ಉಡುಗೊರೆಯನು...
ಎದೆಗಪ್ಪಿಕೊಂಡು ನಾ ಕಾದಿರುವೆನು..
ನಾ ಬಡವ, ನಿನಗಾಗಿ ಬಂದಿರುವೆನು..
ಈ ಮನವ ಪದವಾಗಿ ಬರೆ ಒಮ್ಮೆ ನೀ...
ಬೇರೇ... ಏನಿದೆ ಕಾಣಿಕೆ... ಪ್ರೀತಿಯ ಗೊಂಬೆ ನೀ...
ಕಟ್ಟಿಹೆ ದೇಗುಲವ ಈ ಮನದಿ ಬಾ ಒಮ್ಮೆ ನೀ.....

ನಿನಗಾಗಿಯೇ... ನಿನಗಾಗಿಯೇ....||೩||


---ರಘುರಾಮ್ ಜೋಶಿ---


No comments:

Post a Comment

Share ur feelings with me here