Sunday, December 26, 2010

ಹಾರುವ ಜೀವನ....


ಆಸೆ ನೂರಾರು.. ಕನಸುಗಳು ಹಲವಾರು,
ದಾರಿ ನೂರಾರು, ಗೊಂದಲಗಳು ಸಾವಿರಾರು..

ಬಲಿತ ಮರಿಗೆ ರೆಕ್ಕೆಯ ಬಡಿದು ಬಡಿದು
ಹಾರುವಾಸೆ..
ಗೂಡ ತೊರೆದು ಸ್ವಚ್ಛಂದವಾಗಿ ಹಾರಿ ಹಾರಿ
ದೂರವಾಗುವಾಸೆ..
ಮತ್ತೆ ಬಂದು ಗೆಲುವ ತಂದು ಗೂಡು ಸೇರುವಾಸೆ..

ಆದರೆ.........

ಹಾರುವಾಗ ತಿಳಿಯಲಿಲ್ಲ ರೆಕ್ಕೆ ಹರಿದಿದೆಯೆಂದು..
ಹಾರಿಬಿಟ್ಟೆ.. ಸೋತು ಬಿಟ್ಟೆ.. ಈ ಇಳೆಯಲಿಂದು
ರಾತ್ರಿ ಹಗಲು, ಉರುಳಿ ದಿನವು
ಕತ್ತಲಾಗಿದೆ ಈ ಜಗವು..
ಗೆಲುವಿಗಾಗಿ ಕಾಣದ ದಾರಿಯಲಿ ಒಂಟಿಯಾಗಿಹೆನು..
ಮುದುಡಿದೆ ಭಾವನೆಗಳ ಗುಚ್ಛವು,
ಕದಡಿದೆ ಜೀವನದ ನಗುವು...

ನೆನಪು ಬಾರದ, ಕನಸು ಕಾಣದ ಆ ರಾತ್ರಿಗಳೆಷ್ಟೊ....
ನೋವು,ಅವಮಾನಗಳಿಗೆ ಹೆದರಿ ಮುದುಡಿ ಕುಳಿತ ಆ ದಿನಗಳೆಷ್ಟೊ.....
ಗೆಲುವಿನ ಹಾದಿಯಲಿ ಸೋಲಿನ ಮುಳ್ಳುಗಳೆಷ್ಟೋ.......
ಅದೃಷ್ಟದ ಮೆಲೆ ದುರದೃಷ್ಟದ ಸವಾರಿಗಳೆಷ್ಟೊ.......
ನಗುವಿನ ವಿರುದ್ದ ಅಳುವಿನ ಹೊರಾಟಗಳೆಷ್ಟೊ......

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ..
ಬೇಡಿದ ಹೃದಯದಿ ಕಾಡುವೆ ಈಗ,
ಇವುಗಳ ದುಃಸ್ವಪ್ನವಾಗಿ...
ತಿರುಗಿಯೂ ಕೂಡ ನೋಡದೆ ಓಡುವೆ
ವಿಜಯದ ಈ ಪಥದಲಿ...
ಹೋರಾಡುವೆ ಅವಡುಗಚ್ಚಿ, ಗೆಲುವ ಪಡೆಯುವವರೆಗೆ,
ತಿರುಗಿ ಗೂಡ ಸೇರುವವರೆಗೆ.....
ಮತ್ತೆ ಆಗ ಕನಸ ಕಾಣುವೆ, ಸುಖ ದಿನಗಳ,
ಸುಖ ರಾತ್ರಿಯ, ಸುಖ ನಿದ್ರೆಯಲಿ...
ಮುಕ್ತವಾಗುವೆ ಕೊನೆಗೊಮ್ಮೆ ಈ ಬಾಳ ಜ್ಯೋತಿಯಿಂದ........


---ರಘುರಾಮ್ ಜೋಶಿ---


No comments:

Post a Comment

Share ur feelings with me here