Thursday, June 26, 2014

ಖಾಲಿ ಕೊಡ್ದಲ್ ಹೊಸಾ ನೀರು...





ಖಾಲಿ ಕೊಡ್ದಲ್ ಹೊಸಾ ನೀರು...
ಕುದಿಯೋ ಭೂಮಿ ಮೇಲ್ ಮಳೆಯ ನೀರು...
ಕುಣಿಯೋ ನವಿಲನ್ ಕಂಡೊರ್ಯಾರು...?
ಕವಿ ಮನಸಿನ್ ಹಾಡ್ನ ಕೇಳ್ದೊರ್ಯಾರು....?
ಊರ್ ಊರ್ ತಿರುಗಿ ಕೊನೆಗ್ ಸೇರೋದ್ Barಉ..

ಮುಗ್ಧ ಮನಸು ಹಾಳಾದ್ರೇನು...
ಪ್ರೀತಿ ಗಿಡ ಸತ್ತೊದ್ರೇನು...
ದ್ಯಾವ್ರೇ ಕರೀ ಕೋಟ್ ಹಾಕ್ಕಂಡ್ ಕೂತ್ರೂನೂ Don’t Careಉ…

Lifeಉ ಯಾಕೊ ತುಂಬಾ Boreಉ…
ಸೂತಕದ್ ಮೌನ ಮನಸಿನ್ ಊರು..
ಆದ್ರೇನಂತೆ......
ಕೂರ್ದೇ ನೀನು ದೂರ ಹಾರು...
ಚೂರು ಪಾರು ಹೃದಯದ್ ಚೂರು
ಹೆಕ್ಕಂಡ್, ಅಂಟಿಸ್ಕಂಡ್, ಎಳಕಂಡ್ ಹೋಗು ಮನಸಿನ್ ಥೇರು...

ಬ್ಯಾಸಗೆ ಆದ್ಮೇಲ್ ಬರ್ಲೇ ಬೇಕು ಮುಂಗಾರು..
ನಿನ್ನೆ ಸುದ್ದಿ ಬಪ್ಪದ್ ಇವತ್ತಿನ್ ಪೇಪರ್ರು...
ಆದ್ರೇ.... ಇವತ್ತಿನ್ ಸುದ್ದಿ ನಾಳೆ ಬರ್ಲಕ್ಕು...
ಎದ್ಕಳಾ ಈಗ ಬರ್ದಿದ್ ಸಾಕು...

------------------------- ರಘುರಾಮ್ ಜೋಶಿ--------------------------

3 comments:

  1. ಇತ್ತೀಚೆಗೆ ಚಾಲ್ತಿಯಲ್ಲಿರುವ ಹೊಸ ಸಿನಿಮಾ ಗೀತೆಗಳ ಶೈಲಿಯಲ್ಲಿ ಈ ಕವಿತೆ ಇದೆ.
    ಕವನದ ಹೂರಣದ ಆಗಮನಕ್ಕಾಗಿ ನಾವೂ ಕಾಯುತ್ತಿದ್ದೇವೆ.
    ಪರಂತೂ, ಈ ಬಾರಿ ಯಾಕೋ ಮುಂಗಾರು ಕೈಕೊಡುವ ಹಾಗಿದೆ ಎನ್ನುತ್ತಾರೆ ಹವಾಮಾನ ಇಲಾಖೆ.

    ReplyDelete
  2. Raghuram...anna.......ur soooooooooper.......................keep going

    ReplyDelete

Share ur feelings with me here