ಅದ್ಯಾವ್ದೋ ಸ್ಪರ್ಧೆಗೆ... ಇದೊಂದು ಡಬ್ಬಾ ಕಥೆ ಬರ್ದಿದ್ದೆ ಯಾವಾಗ್ಲೋ...Film Story ಥರ ಬರ್ದಿದ್ದೇನೆ... Film ಅಂದ್ರೆ ಹುಚ್ಚು ನನ್ಗೆ ಅದ್ಕೇ.. ಹೆಂಗಿದೆ ಅಂತ ಹೇಳಿ.. ನಂಗೊತ್ತು ಇನ್ನೂ ಎಲ್ಲೆಲ್ಲೋ ಜಿಜ್ನಾಸೆ ಬೆಳಿಯುತ್ತೆ ಅಂತ ಓದೋವಾಗ.. ತುಂಬಾ ದಿನಗಳ ನಂತರ Blog Open ಮಾಡ್ದೆ ಅನಾಥವಾಗ್ ಬಿದ್ದಿತ್ತು ಪಾಪ... ಸುಮ್ನೆ ಹಂಚಿಕೊಳ್ಳಬೆಕನ್ನಿಸ್ತು ಪುರ್ಸೊತ್ತು ಮಾಡ್ಕೊಂಡು ಇಲ್ಲಿ ಓದಿ... ಇವ್ನ್ಯಾವನು ಗೊಳಿಕ್ತಿದಾನಲ್ಲಾ ಅಂದ್ರು ಸರೀನೆ ..ಓದಿ ಹೇಳಿ ಉಪಯೋಗ ಆಗತ್ತೆ ಇನ್ನೂ ಒಳ್ಳೆ ಕಥೆ ಬರೆಯೊಕೆ...
---- ನಿಮ್ಮ ಪ್ರೀತಿಯ ರಘುರಾಮ್ ಜೋಶಿ
---- ನಿಮ್ಮ ಪ್ರೀತಿಯ ರಘುರಾಮ್ ಜೋಶಿ
ಚಿರಾಯು
*****************************************************************
ಮೌನ ಕಡಲ ಮೇಲಿನ ಹಾಯಿ ದೋಣಿಯಂತೆ ಶಾಂತವಾಗಿ
ತೇಲುತಿತ್ತು ಹೃದಯವು ಈ ಕ್ಷಣದ ಹಿಂದೆ. ಕಣ್ಗಳ್ಯಾಕೋ ಮಂಜಾಗ್ತಿದೆ. ಅದೆಲ್ಲಿಂದಲೋ ಗಾಳಿಯು
ದೊಪ್ಪೆಂದು ಮೈಗಪ್ಪಳಿಸಿದಂತೆ ಭಾಸವು. ಬಹುಷಃ ನೆಲದ ಮೇಲೆ ಬಿದ್ದಿರೋ ಥರ. ಸಹಿಸಲಾರದಷ್ಟು ನೋವು.
ಆ ನೋವಿಗೆ ಅಳೋಕೂ ಆಗ್ತಿಲ್ಲ, ಕೂಗೋಕೂ ಆಗ್ತಿಲ್ಲ. ಇನ್ನೂ ಜಾಸ್ತಿಯಾಗ್ತಿರೋ ಮಂಜಿನ ಪದರಗಳಾಚೆ
ಬಿಳೀ ಕಾಯವೊಂದು ನನ್ನ ಕಿರುಚಿ ಕರೆದಂತೆ. ಮಂಜಾದ ಕಂಗಳ ಮೇಲೆ ನಿಧಾನವಾಗಿ ರೆಪ್ಪೆಗಳು, ನೀರ ಬಿಟ್ಟು ಒದ್ದಾಡುತ್ತಿರುವ ಮೀನುಗಳಂತೆಯೇ ಚಡಪಡಿಸುತ್ತಿವೆ. ಇದ್ದಕ್ಕಿದ್ದಂತೆಯೇ ಜೋರುಜೋರಾಗಿ ಕಿರುಚಾಟಗಳು
ಶುರುವಾದವು. ಅದೇನೋ ಸಿಡಿಲಿನಂಥಾ ಶಬ್ಧಗಳು, ಹಿಂದೆಂದೂ ಕೇಳಿರದಂಥಾ ಶಬ್ಧಗಳಾಗಿದ್ದವು.
ಇಲ್ಲ....
ಆಗ್ತಾ ಇಲ್ಲ... ಏಳೋಕೇ ಆಗ್ತಿಲ್ಲ. ಹೀಗಾಗ್ಬಾರ್ದಿತ್ತೂಂತ ಗೊತ್ತಾಗ್ತಿದೆ. ಆದ್ರೆ ಏನೂ ಮಾಡೋಕಾಗ್ತಿಲ್ಲ.
ಏನೆನೋ ಆಕೃತಿಗಳು. ಏನೆನೋ ಹೇಳಿ ನಕ್ಕಂತೇ...ಮರೆಯಾಗ್ತಿದೆ. ಉಸಿರು ಯಾಕೋ ಬಿಗಿಯಾಗ್ತಿದೆ.
ಉಸಿರು ನನ್ನನ್ನೆಲ್ಲಿಯೋ ಎಳೆದೊಯ್ದಂತೆ. ಹೃದಯ ಬಡಿತ ಹೆಚ್ಚಾಗ್ತಾನೇ ಇದೆ. ಮೈಯಿನ್ನೂ
ಬಿಸಿಯಾಗ್ತಿದೆ. ಆದ್ರೂ ಒಳಗೆ ತಂಪೆನಿಸುತ್ತಿದೆ.
ಮೌನ ಆವರಿಸಿದೆ. ನೋವು ಹೆಚ್ಚಾಗುತ್ತಲಿದೆ..
"ಅಯ್ಯಯ್ಯ್ರೋ.."
"ಹ್ಹ್ಮ್... ಹ್ಹ್ಮ್.. ಹ್ಹ್ಮ್..
ಹ್ಹ್ಮ್..." ಅಂತ ಬಿಗಿಯಾಗಿ ಉಸಿರಾಡ್ತಾ ಪ್ರಾಣ ಹೋಗಿ ಬಂದಂತೇ ಎದೆ ಹಿಡ್ಕೊಂಡು
ಗಾಬರಿಯಿಂದ ಆಲಿಸ್ತೀನೀ..... ಇಲ್ಲಾ... ಇನ್ನೂ ಲಬ್-ಡಬ್ ಅಂತಿದೆ Heartu, ನಿಂತಿಲ್ಲಾಆ.. ಕಣ್ಣು ಬಿಡೋಕೂ
ಆಗ್ತಿಲ್ಲಾ. ಪ್ರಾಣ ಬಂದ್ ಬಾಯಿಗ್ ಬಿದ್ದ ಹಾಗೆ. ಎಂಜಲ್ ನುಂಗ್ಕೋಂಡು ಸುತ್ತ ನೊಡ್ತೀನೀ. ಅದೇ roomu,
ಅದೇ ಕಿಟಕೀ, ಪಕ್ಕಕ್ಕೆ ಅದೇ ಸೋರೆಕಾಯ್ ಸಿಂಗ್ರಿ.
ಥೂಥ್ಥೆರೀ... ಮತ್ತದೇ ಕನಸಿನ್ ಗೋಳಾ.. ಇನ್ಮುಂದೆ
ಮಂಚದ್ ಮೇಲ್ ಮಲ್ಗೋಲ್ಲಾಪ್ಪ, ಇಲ್ಲಾಂದ್ರೆ ನನ್ನ ಮೂಳೇನ ನಾನೇ
ಆರಸ್ಕೊಂಡು ಆಸ್ಪತ್ರೆ ಸೇರ್ಬೆಕಾಗುತ್ತೆ ಆ levelಗೆ ಬಿದ್ದಿದೀನಿ. ಸಿಂಗ್ರಿ ಅಲಿಯಾಸ್ “ಸಂಜಯ್ ಸಿಂಗ್”. ಇಬ್ರೂ ಚಡ್ಡೀ
ದೋಸ್ತ್ರು. Room ಮಾಡ್ಕೊಂಡು ಬೆಂಗಳೂರಿನಲ್ಲಿ
ಕೆಲಸ ಮಾಡ್ತಿದೀನಿ. ಸಿಂಗ್ರಿದು ಬಟ್ಟೆ ಅಂಗಡಿಯಿತ್ತು. Engineeringನ
ಒಟ್ಟಿಗೇ ಓದಿದ್ದು. ಆದ್ರೆ ಮುಗ್ಸಿದ್ದೆಲ್ಲ ಹೆಚ್ಚಾಗಿ ಅವ್ನ ಋಣದಿಂದಲೆ. ಖರ್ಚಿಗಾಗುವಷ್ಟು part
time ಕೆಲಸ ಮಾಡಿ ದುಡಿದುಕೊಳ್ತಿದ್ದೆ. ಬೆಳೆದಿದ್ದು ಅನಾಥಾಶ್ರಮದಲ್ಲಿ.
ಅಲ್ಲಿದ್ದವರನ್ನ ಕೇಳಿದ್ರೆ ನನ್ನವರ ಬಗ್ಗೆ ಗೊತ್ತಿಲ್ಲ ಅಂತಾರೆ. ಮುಂಚಿನದ್ಯಾವ್ದೂ ನನ್ಗೇ
ನೆನಪಿಲ್ಲ. ಬುದ್ಧಿ ಬಲಿತ ಮೇಲೆ ಸ್ವತಂತ್ರವಾಗಿ
ಬದುಕಬೇಕೆಂದು ಅನಾಥಾಶ್ರಮ ಬಿಟ್ಟು ಸುಮಾರು ವರ್ಷವಾಗಿತ್ತು. ವಿಜ್ಞಾನಿಯಾಗಬೇಕೆನ್ನುವುದು ನನ್ನ
ಪರಮ ಗುರಿಯಾಗಿತ್ತು.
***************************
ಪದೇ ಪದೇ ತಲೆಯೊಳಗೆಲ್ಲಾ ಅದೇ ಧ್ವನಿ, ಅದೇ ಅಸ್ಪಷ್ಟ ನೆರಳುಗಳು. ಒಂಟಿಯಾಗಿದ್ದಾಗಲೆಲ್ಲಾ
ಹುಚ್ಚು ಹಿಡಿದ ಹಾಗಾಗುತ್ತಿತ್ತು. ಹೇಗಿತ್ತು ಗೊತ್ತಾ.. ನನ್ನನ್ನ ಊಹಿಸಿಕೊಂಡರೆ ಯಾಕೆ
ಇಲ್ಲಿದೀನಿ, ಯಾರು ನಾನು, ಆ ಕನಸುಗಳೇನು,
ಗತದ ಯಾವೊಂದು ನೆನಪುಗಳಿಲ್ಲದೇ ಇಲ್ಲಿ ಬದುಕುವುದೇ ಅನರ್ಥವೆನ್ನಿಸುತಿತ್ತು.
ಛೇ.. ಸುತ್ತಮುತ್ತಲ ವಾತಾವರಣಗಳಲ್ಲಿ ಅಪ್ಪ-ಅಮ್ಮಂದಿರ ಪ್ರೀತಿ, ನಕ್ಕು-ನಲಿಯೋ
ಮುಗ್ಧ ಬಾಲ್ಯಗಳು ಮತ್ತು ಅವುಗಳ ನೆನಪುಗಳನ್ನು ನೋಡಿ ಹೊಟ್ಟೆಯುರಿಯೋದು. ಎಲ್ಲವೂ
ಮರೀಚಿಕೆಯಾಗಿಯೇ ಮರೆಯಾಗಿದ್ವು.
ಯಾವೊಂದು
ಪ್ರೀತಿಯ ಕ್ಷಣವೂ ನೆನಪಿಲ್ಲದ ನನಗೆ ತಾಯಿಯಂತೆ ನೆರಳಾಗಿ ನೋಡಿಕೊಂಡಿದ್ದು ನಮ್ಮ ಅನಾಥಾಶ್ರಮ
ಮತ್ತು ಅಲ್ಲಿನ ಸಿಬ್ಬಂದಿಗಳು. ನನಗೆಷ್ಟು ವಯಸ್ಸು ಅನ್ನೋದು ನಿಖರವಾಗಿ ಇನ್ನೂ ಗೊತ್ತಿಲ್ಲ. ತಲೆಯೆಲ್ಲಾ
ರಕ್ತಸಿಕ್ತವಾಗಿ ಜ್ಞಾನ ತಪ್ಪಿ ಬಿದ್ದಿದ್ನಂತೆ ರಾಮೋಹಳ್ಳಿಯ ಹತ್ತಿರ ಯಾವ್ದೋ ಒಂದು ಮೋರೀಲಿ.
ಯಾರೋ ಮೋರಿ ಕ್ಲೀನ್ ಮಾಡೋರು ನೋಡಿ ಸುತ್ತಮುತ್ತಲ ಜನರೆಲ್ಲಾ ಸೇರಿ ಆಸ್ಪತ್ರೆಗೆ ಸೇರಿಸಿ
ಬದುಕಿಸಿದ್ರಂತೆ. ಡಾಕ್ಟ್ರು, ನಾನು ಬದುಕುಳಿದಿದ್ದು ಒಂದು
ಪವಾಡವೇ ಸರಿ ಅಂದಿದ್ರಂತೆ. ಮಾನವೀಯತೆ ಮೆರೆದ ಅವರಿಗೆ ನಾನೆಷ್ಟು ಋಣಿಯಾದರೂ ಸಾಲದು. ಆಗ ಅಂದಾಜು
೧೦-೧೨ ವಯಸ್ಸಿರಬಹುದೆನ್ನುತ್ತಾರೆ. ನಂತರ ಅನಾಥಾಶ್ರಮಕ್ಕೆ ಸೇರಿಸಿದ್ರಂತೆ. ಅಲ್ಲಿಂದಲೇ ನನ್ನ
ಜೀವನವು ನೆನಪಿರುವುದು.
ವೈದ್ಯರ
ಪ್ರಕಾರ ನನ್ನ ಮೆದುಳಿನ ಸ್ಮ್ರತಿ ಪಟಲದಲ್ಲಿ ಹೆಚ್ಚು ರಕ್ತಸ್ರಾವವಾದಕಾರಣ, ರಕ್ತಸಂಚಲನೆ ಸರಿಯಾಗಾಗದೇ ಗತಗಳ ನೆನಪುಗಳು ಅಲ್ಲೇ
ಹುದುಗಿಬಿಟ್ಟಿವೆ. ಆದಕಾರಣ, ಶಸ್ತ್ರಚಿಕಿತ್ಸೆಯಾದ ನಂತರದ ಕ್ಷಣಗಳು ಮಾತ್ರ ನೆನಪಿನಲ್ಲಿವೆಯೆಂದು
ನಂತರದ ಪರೀಕ್ಷೆಗಳಿಂದ ತಿಳಿಯಿತು. ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಯಿಂದ ಬಹಳ ಕಠಿಣತೆ
ಇರುವುದರಿಂದ ನಂತರದ ಪರಿಣಾಮಗಳಿಗೆ ಗ್ಯಾರಂಟಿ ಕೊಡಲು ಯಾವೊಬ್ಬ ವೈದ್ಯರೂ ಸಿದ್ಧರಿರಲಿಲ್ಲ. ಅದರ
ಖರ್ಚು ಕೂಡಾ ಜಾಸ್ತಿಯಾಗಿತ್ತು. ನನ್ನ ತಲೆ ಮೇಲೆ ಗಾಯದ ಕಲೆಯೊಂದು ಹಾಗೇ ಉಳಿದಿದೆ.
ಈಗ
ನೋಡಿದ್ರೆ ಯಾಕಾದ್ರೂ ಉಳಿಸಿದ್ರೊ , ಯಾಕಾದ್ರೂ
ಬದುಕಿದೀನೊ ಅಂತನ್ನಿಸುತ್ತದೆ ಕೆಲವೊಮ್ಮೆ. ಹಿಂಸೆಯಾಗ್ತಿತ್ತು ಇವುಗಳೆಲ್ಲ ಮನದಲ್ಲಿ ಹಾದು ಹೋದಾಗ. ಧ್ಯಾನ, ಯೋಗಗಳನ್ನು ಮಾಡ್ತಿದ್ದೆ. ಯೋಚನೆಗಳು ಆ ಕಾರಣದಿಂದಾಗಿಯೇ ಸ್ಥಿಮಿತದಲ್ಲಿತ್ತು. ಬೇಸರವಾದಾಗೆಲ್ಲಾ
ದೇವಸ್ಥಾನಕ್ಕೆ ಹೊಗ್ತಿದ್ದೆ. ಮನಸು ತಿಳಿಯಾಗಿ ಹಾಯೆನಿಸೊದು.
ಹೀಗೇ ಒಂದಿನ ದೇವಸ್ಥಾನಕ್ಕೆ ಹೋಗಿದ್ದೆ. ಕೈ ಮುಗಿದು ಪ್ರದಕ್ಷಿಣೆ ಹಾಕುತ್ತಿದ್ದೆ. ಇನ್ನೂ ಒಂದು ಪ್ರದಕ್ಷಿಣೆಯಷ್ಟೇ ಮುಗಿದಿತ್ತು. ಅಷ್ಟರಲ್ಲೇ ಕಾಲಿಗೇನೋ ಚುಚ್ಚಿತ್ತು. "ಅಮ್ಮಾsss", ಜೀವ ಹೋಗೊವಷ್ಟು ನೋವಾಯ್ತು. ಏನೆಂದು ಎತ್ತಿ ನೋಡಿದ್ರೆ, ಕಿವಿಯ ಓಲೆಯಾಗಿತ್ತು. ಚಿನ್ನದ್ದೇss. ಅರೇss!!, ಇಲ್ಲಿಗೆ ಹೇಗೆ ಬಂತೆಂದು ನೋಡುತ್ತಿರುವಾಗಲೇ... ಸ್ವಲ್ಪ ಹಿಂದಿಂದ ಗೆಜ್ಜೆ ಸದ್ದಿನೊಂದಿಗೆ ಕೆಂಪು ಸೀರೆಯುಟ್ಟ ದೇವತೆಯಂತೇ ಕಂಡಳು ನನ್ಗೆ. ಆಹಾ.. ಆ ಮುದ್ದು ಮೊಗವೋ, ಆ ಮೈಮಾಟವೋ, ಕೈ ಮುಗಿದ ಭಕ್ತಿಯೋ, ಆ ಸೀರೆ ಎಷ್ಟು ಪುಣ್ಯ ಮಾಡಿದೆಯೋ ಅವಳ ಸೊಂಟದ ಮೇಲೆ ಅಷ್ಟು ಚೆನ್ನಾಗಿ ಕೂತಿತ್ತು.
ಬರಗಾಲದ ಬೆಂಗಾಡಿನಲ್ಲಿ ಮುಂಗಾರಿನ ಆರಂಭದ ಮುನ್ಸೂಚನೆಯಂತೆ, ನನ್ನೆದೆಯ ಬಿಸಿ ಗಾಳಿ ತಂಪು ತಂಗಾಳಿಯಾಗಿ ಮಾರ್ಪಟ್ಟು, ಇಡೀ ಜಗವೇ ನಿಧಾನವಾಗಲು ಶುರುವಾಗಿದೆ. ಬಹುಶಃ ಅವಳ ಮಾಯವೇ ಇರಬೇಕು. ಚಂದಿರನ ಮಗಳಂತೆ ಕಾಣುತಿದ್ದಳು. ಹೃದಯ ಬಡಿತವೇಕೊ ಹೆಚ್ಚಾಗಿದೆ. ದಾರಿ ಕಾಣದ ಹಡಗಿಗೆ ನೀಲ ನಕ್ಷತ್ರದಂತಿದ್ದ ಅವಳನ್ನು ನನಗೆ ತಿಳಿಯದಂತೆಯೇ ಹಿಂಬಾಲಿಸಲು ಶುರುಮಾಡಿದೆ. ಪ್ರದಕ್ಷಿಣೆ ಮುಂದುವರೆದಿತ್ತು. ಅವಳ ಪ್ರದಕ್ಷಿಣೆ ಮುಗಿದು ನಿಂತಳು. ನನ್ನ ಹೃದಯ ಅವಳನ್ನು ಪ್ರದಕ್ಷಿಸುತ್ತಲೇ ಇತ್ತು. ನನಗೆ ಅರಿವೇ ಇರಲಿಲ್ಲ, ಹಿಂದಿನಿಂದ ಅವಳಿಗೆ ಡಿಕ್ಕಿ ಹೊಡೆದಿದ್ದೆ.
"ಛಟ್ಟ್".......
ಅಂತ ಕಪಾಳಕ್ಕೊಂದು ಬಿದ್ದ ನಂತರವೇ ವಾಸ್ಥವವೂ ಮಿಂಚಿನಂತೇ ಬಡಿದಪ್ಪಳಿಸಿತು. ಅವಳೇ ಮೋಡಿ ಮಾಡಿ ಈಗ ಅವಳೇ ಕೆನ್ನೆಗೆ ಹೊಡೆದಿದ್ದಳು, ಛೀ ಕಳ್ಳಿ. ನಿಶ್ಯಬ್ಧವಾದ ದೇವರ ಸನ್ನಿಧಿಯಲ್ಲಿ ಮಂತ್ರ ಶುರುವಾಗುವ ಮೊದಲೇ ನನ್ನ ಮುಖಕ್ಕೆ ಮಂಗಳಾರತಿಯಾಗಿತ್ತು. ಎಲ್ಲರೂ ನಮ್ಮನ್ನೇ ನೋಡುತ್ತಿದ್ದರು. ಅವಮಾನವಾದಂತಾಯಿತು. ಅವಳು ಮಾತು ಶುರುಮಾಡುವ ಮೊದಲೇ ನಾನು... "ಯಾಕ್ರೀ ಹೊಡದ್ರೀ, Sorry ಆಯ್ತಾ.. ಕಾಲು ಸ್ಲಿಪ್ ಆಯ್ತು ಅಷ್ಟೇ. ಈ ಕಿವಿಯೋಲೆ ನಿಮ್ದಾ? ಅಂತ ಕೇಳೊಕೆ ಬಂದೆ.. ". ನನ್ನ ಪುಣ್ಯ ಓಲೆ ಕಾರಣಕ್ಕೆ ಸಿಕ್ಕಿ ಬಡ ಜೀವ ಉಳಿಯಿತೆಂದುಕೊಂಡೆ. ಅವಳ ಮುದ್ದಾದ ಕೈಯಿಂದ ತನ್ನ ಪುಟಾಣಿ ಕಿವಿಗಳನ್ನು ಮುಟ್ಟಿ ನೊಡ್ಕೊಂಡು... "ಅಯ್ಯೋ.. I’m really Sorry ಕಣ್ರೀ. ಅದು ನನ್ನದೇ ಓಲೆ. ನೀವು ಹಿಂದೇನೇ ಬರ್ತಿದ್ರಲ್ಲಾ, ನಂತ್ರ dash ಹೊಡದ್ರೀ. ಅದ್ಕೇ ಅಪಾರ್ಥ ಮಾಡ್ಕೊಂಡು ಹೊಡದ್ಬಿಟ್ಟೆ. ದಯವಿಟ್ಟು ಮನ್ಸಿಗೆ ಹಚ್ಚ್ಕೋಬೇಡಿ please" ಅಂದ್ಬಿಡೊದಾ..!! ಅದೂ ಪಾಪಚ್ಚಿ ಥರಹ. ನನ್ನ ಕೈ ಹಿಡ್ಕೊಂಡು ಮುದ್ ಮುದ್ದಾಗಂದ್ಳು ನೋಡೀ... ವಾವ್!!!
"ಮಗಾ, ಲಡ್ಡು ಬಂದು ಬಾಯಿಗ್ ಬಿತ್ತಾ!!" ಅಂದ್ಕೊಂಡೆ. ಹ್ಹಹ್ಹ, ಅದೃಷ್ಟವಶಾತ್ ಆ ಓಲೆ ಅವಳ್ದೇ ಆಗಿತ್ತು.
Sorry, Sorry, Sorry ಅಂತ ಅದೆಷ್ಟು ಸರ್ತಿ ಕೇಳ್ಬಿಟ್ಳೋ. ಹಾಗೇ ಮಾತಾಡ್ತಾ ದೇಗುಲದ ಮುಂದಿನ ಅರಳಿ ಮರದ ಕಟ್ಟೇ ಮೇಲೆ ಕೂತ್ಕೊಂಡು ಕಥೆ ಹೊಡ್ಯೋಕೆ ಶುರು ಮಾಡಿದ್ವಿ. ತುಂಬಾ ಬೊಲ್ಡ್ ಹುಡುಗಿಯಾಗಿದ್ಳು. ಒಂದೇ ಸಮನೆ ವಟ-ವಟಾ ಅಂತಿದ್ಳು. ಏನಾದ್ರೂ ಓಲೆ ಕಳೆದೋಗಿದ್ರೆ ಮನೇಲಿ ಬೈಸ್ಕೋಬೇಕಿತ್ತಂತೆ, ಅಮ್ಮ ಕೊಟ್ಟಿದ್ದಂತೆ. ಇನ್ನೂ ಎನೇನೆನೆನೆನೊ ವಟಗುಡುತ್ತಿದ್ದಳು. ನಾನು ಅವಳು ಮಾತನಾಡುವ ಸೊಬಗನ್ನೇ ನೊಡುತ್ತಾ ಕುಳಿತಿದ್ದೆ. ತುಂಬಾನೇ ಇಷ್ಟ ಆಗೋದ್ಳು. ಇಬ್ರೂ ಮನಸಿಗೆ ಹತ್ತಿರವಾದ್ವಿ. ಪಾಪ, ನಮ್ಮನ್ನ ಮಾತಾಡ್ಸೋ ಹಾಗೆ ಮಾಡಿದ ದೇವ್ರು ನಮ್ಮಿಬ್ಬರ ಸುದ್ದಿ ಕೇಳ್ಕೊಂಡು ಗುಮ್ಮೆಂದು ಕೂತ್ಬಿಟಿದ್ದ. ಅವಳು ಕೆನ್ನೆಗೆ ಹೊಡೆದು ಅವಮಾನಿಸಿದ್ದರ ಪಶ್ಚಾತ್ತಾಪಕ್ಕಾಗಿ ಮಾತನಾಡಿಸಿದ್ಳು ನನ್ನನ್ನು ಅಂದ್ಕೊಂಡ್ರೂ ಆಗ್ತಿರೋದ್ರಲ್ಲಿ ತಪ್ಪೆನೂ ಅನ್ನಿಸಲಿಲ್ಲ..!!.
"ತಡವಾಯಿತು, Bye ಕಣೋ ಹೊಗ್ ಬರ್ತೀನಿ" ಎಂದು ಹೇಳಿಹೋಗುವಷ್ಟು ಸಲುಗೆಯಾಗಿ, BMW Carಲ್ಲಿ ಹೊರ್ಟೋಗ್ಬಿಟ್ಳು. ಹ್ಮ್..... ಅಲ್ಲಿಗೇ ಇವ್ರಪ್ಪ ಧನಪತಿಯೇ ಅಂತಾಯ್ತು. ಹೇ... ಅಂದಾಃಗೆ ಅವ್ಳ ಹೆಸರು "ಹರಿಣಿ" ಅಂತ. ವಾವ್...!! ಅಲ್ವಾ..!! ಇನ್ಮುಂದೆ ಎಲ್ಲಾ ವಾವ್ವೇ. ಏನಂದ್ರೇ, ನಂಗೆ "LOVE AT FIRST SIGHT” ಲ್ಲಿ ನಂಬಿಕೆಯಿಲ್ಲ. ನಂಬಿಕೆ ಹುಟ್ಟಲೆಂದೇ ಇನ್ನೊಂದು ಬಾರಿ mallನಲ್ಲಿ ಸಿಕ್ಕಿದ್ಳು. ಆಗ ನಮ್ಮ ಫ಼ೋನ್ ನಂಬರ್ ಬದಲಾಯಿಸಿಕೊಂಡು, Full chatting, Full talking. ಶ್ರೀಮಂತಳಾದ್ರೂ ತುಂಬಾ ಸಿಂಪಲ್ಲಾಗೇ ಇದ್ಳು. ಹೇ.. ನಿಲ್ಲಿ ಒಂದ್ನಿಮಿಷ LOVE ಅಂದ್ನಾ ನಾನೂ... ಛೇ.. ಏನೋ ಗೊತ್ತಿಲ್ಲ ಕಣ್ರೀ ಕವಿಗಳು ಹೇಳೋ ಈ ಹಾಳಾದ್ ರೋಗದ ಎಲ್ಲಾ ಲಕ್ಷಣಗಳೂ ಕಾಣಿಸಿಕೊಂಡಿತ್ತು. ಅವಳೇ ಈ ರೋಗಕ್ಕೆ ಔಷಧಿ ಕೊಟ್ಟು ವಾಸಿಮಾಡಬೇಕಿತ್ತು. ಆ ದಿನವೂ ಬಂದೇ ಬಿಡ್ತು ಒಂದ್ಸರ್ತಿ.
ತುಂಬಾ ಮಾತುಗಳ ನಂತರ, ಒಂದಿನ ಅವಳ ಊರಾದ ಮಡಿಕೇರಿಗೆ ಕರೆದಳು. ತಲಕಾವೇರಿಯ ಬೆಟ್ಟದ ಮೇಲೆ ನಿಂತ್ಕೊಂಡು ಮಾತಾಡ್ತಾ ಸೂರ್ಯೊದಯದ ವಿಹಂಗಮ ನೋಟವನ್ನು ವೀಕ್ಷಿಸುತ್ತಿದ್ದೆವು. ಕಂಬಿ ಮೇಲಿದ್ದ ನಮ್ಮಿಬ್ಬರ ಕೈ ಇದ್ದಕ್ಕಿದ್ದಂತೇ (ಅಕಸ್ಮಾತ್?!!..) ಒಂದರಮೇಲೊಂದು ತಾಕಿತ್ತು. ತಕ್ಷಣ ಎರಡು ಜೋಡಿ ಕಣ್ಗಳು ರೆಪ್ಪೆಗಳ ಚಿಟ್-ಪಿಟ್ ರೆಕ್ಕೆಯೊಂದಿಗೆ ಆಕಾಶದಾಚೆಗೆ ಹಾರಲು ಶುರುಮಾಡಿತು. ಇನ್ನೇನು ಎರಡು ಹೃದಯಗಳು ಒಂದಾಗೋ ಸಮಯ, ಹಾರಿ ಪ್ರೇಮ ಲೋಕಕ್ಕೆ ಸೇರುವ ಸಮಯ, ಶಬ್ಧಗಳೇ ಬೇಡವಾಗಿತ್ತು. ಮನವೆರಡು ಒಂದಾಗಿದ್ವು. ಆದ್ರೂ ಅವಳೇ ಮೊದಲು ನುಡಿದಿದ್ದಳು, "I LOVE YOU.. ನೀನಂದ್ರೆ ತುಂಬಾ ಇಷ್ಟ ಕಣೋ..". ತಡಮಾಡದೇ ಅವಳ ನಡುವ ಬರಸೆಳೆದು, ಅವಳ ಹೊಳೆಯುತಿದ್ದ ಕಂಗಳನ್ನೆ ನೋಡುತ್ತಾ, "ನನ್ಗೆ ಪ್ರೀತಿ ಅಂದ್ರೆ ಏನಂತಲೇ ಗೊತ್ತಿಲ್ಲಾ ಕಣೇ... ಜೀವನ ಪೂರ್ತಿ ಜೊತೇಲಿದ್ದು ಹೇಳ್ಕೊಡ್ತೀಯಾ plz" ಅಂತಂತಿದ್ದ ಹಾಗೆಯೇ ಇಬ್ಬರ ಕಣ್ಗಳಲ್ಲು ಹನಿಯೊಡೆದು, ಅವಳು ತನ್ನ ಎರಡೂ ಕೈಗಳಲ್ಲಿ ನನ್ನ ಗುಂಡು ಮೊಗವನ್ನು ಹಿಡಿದು ಮುತ್ತುಗಳ ಮಳೆಗರೆದಳು. ಅವತ್ತು ಅಮ್ಮನ ವಾತ್ಸಲ್ಯ, ಸಹೋದರಿಯ ಕಾಳಜಿ, ಪ್ರೇಯಸಿಯ ಪ್ರೇಮವೆಲ್ಲವೂ ಸಿಕ್ಕ ಭಾವವು ಆವರಿಸಿತ್ತು, ಅನಾಥನಾದರೂ.
ಅನಂತರದ ದಿನಗಳಲ್ಲಿ ಮಡಿಕೇರಿಯ ಸಮೀಪದ ಅವರದೇ ಆಡಳಿತದ ಸಂಘದ ಶಾಲೆಗೆ ಟೀಚರಾಗಿ ಸೇರಿಕೊಂಡಿದ್ದಳು. ಅವಳ passion teaching ಆಗಿತ್ತು. ನಾನು ನನ್ನ ಕೆಲಸದಲ್ಲಿ ಮಗ್ನನಾದೆ. ಆಗಾಗ ಭೇಟಿಯಾಗುತಿದ್ದೇವಷ್ಟೆ. ನಮ್ಮಿಬ್ಬರ ಪ್ರೀತಿ ಚಿಗುರಿ ಹೆಮ್ಮರವಾಗಿತ್ತು. ಆದರೂ ಅವರ ಮನೇಲಿ ನಮ್ಮಿಬ್ಬರ ಮದುವೆ ಬಗ್ಗೆ ಸ್ವಲ್ಪ ತಲೆಬಿಸಿಯಿತ್ತಂತೆ.
ಆಕಾಶ-ಭೂಮಿಯಂತಿದ್ದ ನಮ್ಮ ಪ್ರೀತಿಗೆ ನಿಧಾನವಾಗಿ ಕಾರ್ಮೋಡಗಳು ಅಡ್ಡ ಬರುವುದಕ್ಕೆ ಶುರುವಾಗಿತ್ತು. ದಿನೇ ದಿನೇ ನನಗೆ ಕರೆ ಮಾಡುವುದು ಕಡಿಮೆಯಾಗಿತ್ತು. ಏಕೆಂದು ಕೇಳಿದರೆ ಉತ್ತರವಿರುತ್ತಿರಲಿಲ್ಲ. ಹೋಗಲಿ ಬಿಡು, ಆಗೊಮ್ಮೆ ಈಗೊಮ್ಮೆ ಭೇಟಿಯಾಗೆಂದರೂ ಪ್ರತಿಕ್ರಿಯೆಯಿರುತ್ತಿರಲಿಲ್ಲ. ಕಾರಣಗಳೇನೂ ಹೇಳುತ್ತಿರಲಿಲ್ಲ. ಆದರೆ ಏನೋ ಹೇಳಲಾಗದೇ ಒದ್ದಾಡುತ್ತಿದ್ದಾಳೆಂದು ನಿಸ್ಸಂಶಯವಾಗಿ ತಿಳಿದಿತ್ತು. ಏಕೆಂದರೆ ಇದು ಹೃದಯಗಳಾ ವಿಷಯ. ಒಂದಿನ ಸಂಪೂರ್ಣವಾಗಿ ಸಂಪರ್ಕವೇ ಕಡಿದು ಹೋಯಿತು. ಏಕೋ ಭಯವಾಗತೊಡಗಿತು. ಪ್ರತಿದಿನವೂ ಕರೆಮಾಡಲೆತ್ನಿಸುತ್ತಿದ್ದೆ. ಹಾಗಾಗಿಯೂ, ಕೆಲಸದೊತ್ತಡಗಳಲ್ಲಿ ಮೂರು ತಿಂಗಳು ಕಳೆದೇ ಹೊಗಿತ್ತು. ಮುಖವಾಡದ ನಗುವಿದ್ದರೂ, ನಗುವಿನ ಹುಡುಕಾಟ ನಡೆದೇ ಇತ್ತು. ಒಂದಿನ
ತಡೆಯಲಾಗದೇ ರಾತ್ರಿಯೇ ಮಡಿಕೇರಿಗೆ ಹೊರಟೆ.
ಬೆಳಿಗ್ಗೆಯಾದೊಡನೆ ತಯಾರಾಗಿ ಹರಿಣಿಯ ಶಾಲೆ ಹುಡುಕಿ ಹೊರಟೆ. ಮಧ್ಯಾಹ್ನದ ವೇಳೆಗೆ ಶಾಲೆ ತಲುಪಿದೆ. ಕೊನೆಗೂ ಮೇಲ್ಮಹಡಿಯ ಕೊಠಡಿಯೊಂದರಲ್ಲಿ ಏನೋ ಗೀಚುತ್ತಿದ್ದಳು ಪಾಪಿ. ತುಂಬಾ ದಿನದ ನಂತರ ನನ್ನನ್ನು ಪ್ರತ್ಯಕ್ಷ ಕಂಡು ಕರಗಿ ನೀರಾಗಿ ಹೋದಳು ನನ್ನ ಮುದ್ದು ದೇವತೆ. ನನ್ನನ್ನೆಳೆದು ತಕ್ಷಣ ಬೇರೊಂದು ಕೊಠಡಿಗೆ ಕರೆದೊಯ್ದು, "ನನಗೂ ಕಷ್ಟವಾಗುತ್ತೆ ಕಣೋ ನಿನ್ನನ್ನ ಕಳ್ಕೊಳ್ಳೋಕೆ. ನೀನಂದ್ರೆ ಹುಚ್ಚು ನಂಗೆ. ಮನೇಲಿ ಹೇಳಿದ್ರೆ, ಅಂತಸ್ತು-ಅಂತಸ್ತೆಂದು ಸಾಯಸ್ತಿದಾರೆ. ನಿನಗೇನಾದ್ರೂ ಮಾಡ್ತಿನೀ ಅಂತನೂ ಹೆದರಿಸಿದ್ರು ಅಪ್ಪ. ಅಪ್ಪ ಯಾಕೆ ಹೀಗಾಡ್ತಿದಾರೊ ಗೊತ್ತಿಲ್ಲ. ಅವರನ್ನು ಈ ಥರಹ ನೋಡಿದ್ದು ಇದೇ ಮೊದಲ್ನೇ ಸರ್ತಿ. ನಿನ್ಗೆ ಏನು ಹೇಳ್ಬೇಕಂತಲೇ ಗೊತ್ತಾಗ್ಲಿಲ್ಲ. ಫೊನ್ ಬೇರೆ ಉಪಯೊಗಿಸೊ ಹಾಗಿಲ್ಲ ಅಂದ್ರು. ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ನಿನ್ನ. ಏನ್ಮಾಡೋದೋ ಈಗ ಬಂಗಾರೂ?.. ನನ್ಗೇನೂ ದಾರಿನೇ ಕಾಣ್ತಿಲ್ಲ."
ಅಮ್ಮಯ್ಯಾ... ಈಗ ಜೀವ ಬಂದ ಹಾಗಾಯ್ತು. "ಲೇ ಗೂಬೆ, ಏನಾಗಲ್ಲಾ ಕಣೇ.. ಮಾಮೂಲೀ ಫ್ಹಿಲ್ಮ್ ಥರಹ ನಿಮ್ಮಪ್ಪನ್ನ ಒಪ್ಪಿಸೋದು, ಆಗಲ್ಲವೆಂದರೆ ಹೊರಡ್ತಾ ಇರೋದೆ. ನೀನು ಧೈರ್ಯ ತಂದ್ಕೋಬೇಕಷ್ಟೇ" ಎಂದು ಸಮಾಧಾನ ಪಡಿಸಿದೆ.
"ಹ್ಮ್ ಚರಿ... ತುಂಬಾ ನೋವು ಕೊಟ್ಟೆನಲ್ವಾ ಚಿನ್ನೂ Sorryyyy…" ನನ್ನ ಮಖವೀಗ ನಗುವಿನಿಂದ ತುಂಬಿ ತುಳುಕುತ್ತಿತ್ತು.
ಒಮ್ಮೆ ನಕ್ಕು "ಸರಿ ಯಾರಾದ್ರೂ ನೋಡದ್ರೆ ಕಷ್ಟ. ನಾನಿನ್ನು ಹೊರಡ್ತೀನಿ" ಅಂತಂದು ಅವಳ ಹಣೆಗೊಂದು ಮುತ್ತಿಕ್ಕಿ ಹೊರಟೆ.
ಸ್ವಲ್ಪ ಮುಂದೆ ಹೊಗುತ್ತಿದ್ದಂತೆಯೇ ವಿರುದ್ಧ ವರಾಂಡಾದಿಂದ ಒಂದಷ್ಟು ಜನ ವಿಚಿತ್ರ ಉಡುಪು ಧರಿಸಿದವರು ನನ್ನ ಸಮೀಪಕ್ಕೆ ಬರುತ್ತಿರುವುದ ನೋಡಿದೆ. ಇವರನ್ನೆಲ್ಲೋ ನೊಡಿದ್ದೇನಲ್ಲವೆಂದುಕೊಂಡು ಇಳಿಯುವಾಗಲೇ, ನನ್ನ ಮೆದುಳಲ್ಲಿ ಎಚ್ಚರಿಕೆಯ ಕರೆಗಂಟೆ ಬಾರಿಸಿತು. ಒಬ್ಬಬ್ಬರನ್ನೂ ಒಮ್ಮೊಮ್ಮೆ ಹರಿಣಿಯ ಸುತ್ತ-ಮುತ್ತವಿದ್ದಿದ್ದನು ಗ್ರಹಿಸಿದ್ದೆ. ಆದರಿಲ್ಲಿ ಎಲ್ಲರೂ ಒಟ್ಟಿಗಿರುವುದ ಕಂಡು ಅರ್ಥವಾಗಿತ್ತು. ಇವರೆಲ್ಲಾ ಅವಳಪ್ಪನು ಸಾಕಿದ ನಾಯಿಗಳಿರಬಹುದೆಂದು. ಆಗಲೇ ಹಿಂದಿಂದ ಹರಿಣಿಯ ಜೋರಾದ ಸ್ವರ ಕೇಳಿಸ್ತು "ಚಿನ್ನೂ.. ತಪ್ಪಸ್ಕೊ ಇಲ್ಲಿಂದ" ಅಂತ. ತಕ್ಷಣ ಅಲ್ಲಿಂದ ಕಾಲ್ಕಿತ್ತು ಓಡಲು ಶುರುಮಾಡಿದೆ. ಒಳ್ಳೆಯ ಮೈಕಟ್ಟೂ, ಕ್ರೀಡಾಪಟುವಾಗಿದ್ದ ನನ್ನನ್ನು ಹಿಡಿಯುವುದಷ್ಟು ಸುಲಭವಾಗಿರಲಿಲ್ಲ. ಅದೇ ಸಮಯಕ್ಕೆ ಶಾಲೆಯ ಬೆಲ್ ಹೊಡೆದಿತ್ತು. ಆ ಮಕ್ಕಳ ಗುಂಪಲ್ಲಿನ್ನೂ ಮುಂದೆ ಓಡಿದೆ. ಒಂದನೇ ಮಹಡಿಯಲ್ಲಿರುವಾಗಲೇ ಕಟ್ಟಡದ ಗೇಟ್ ಮುಚ್ಚಿಸಿದರು. ಕಾಮಗಾರಿ ರೂಪದಲ್ಲಿದ್ದ ಗ್ರಿಲ್ ಹಾಕಿಸುತ್ತಿದ್ದ ಕಿಂಡಿಯಿಂದಲೇ ಹೊರಗೆ ಜಿಗಿದು, ಕೆಳ ಮಹಡಿಯ ಕಿಟಕಿ ಮೇಲಿಂದ ನೆಲಕ್ಕೆ ಜಿಗಿದು ಅಲ್ಲಿಂದ ಓಡಲು ಶುರುಮಾಡಿದೆ. ಶಾಲೆಯು ಬೆಟ್ಟದ ಮೇಲಿರುವುದರಿಂದ ಇಳಿಜಾರಿನಲ್ಲಿ ಓಡುತ್ತಲಿದ್ದೆ. ಬೆಂಬಿಡದೇ ಅಟ್ಟಿಸಿಕೊಂಡು ಬರುತ್ತಲಿದ್ದರು.
ಬಹುದೂರವೋಡಿದ ನಂತರವೊಮ್ಮೆ ದೊಡ್ಡದೊಂದು ಕಂಪೌಂಡ್ ಮೇಲೆ ಜಿಗಿದಿಳಿಯುತ್ತಿದ್ದೆ. ಆಗಲೇ ನೋಡಿ ನನ್ನ ತಲೆಯ ಸಮಸ್ಯೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು. ಓಡಿದ ಒತ್ತಡಕ್ಕೆ ತಲೆ ಭಾರವಾಗಿ ಕುಸಿದುಬಿದ್ದೆ. ಮುಟ್ಟಿ ನೋಡಿಕೊಂಡಾಗ ಗಾಯವಿದ್ದಲ್ಲಿಂದಲೇ ರಕ್ತ ಬಸಿಯುತ್ತಿತ್ತು. ಮತ್ತೆ ಪ್ರಜ್ಞೆ ಬಂದಾಗ ಬರೋಬ್ಬರಿ ಒಂಭತ್ತು ದಿನವಾಗಿತ್ತಂತೆ. ಸುತ್ತಲೂ ನೋಡಿದಾಗ ಬೌದ್ಧ ಸಂತರಿರುವು ಗಮನಕ್ಕೆ ಬಂತು. ಅಂದ್ರೆ ಆ ರಕ್ಕಸರಿಂದ ತಪ್ಪಿಸಿಕೊಂಡಿದ್ದೇನೆಯೆಂದಾಯ್ತು. ಪ್ರಜ್ಞೆ ತಪ್ಪಿ ಒಂಭತ್ತು ದಿನ ಅವರ ಆರೈಕೆ, ಚಿಕಿತ್ಸೆಯಲ್ಲೇ ಗುಣವಾಗಿಬಿಟ್ಟೆ. ಆ ಬುದ್ಧದೇವನ ಕರುಣೆಯೇನೋ, ಅಥವಾ ಸಂತರ ಪವಾಡವೇನೊ..... ’ನನಗಾಗ ಹಳೆಯ ನೆನಪುಗಳೆಲ್ಲವೂ ಮರುಕಳಿಸಿತ್ತು ಹ್ಹಹ್ಹಹ್ಹ’.
*************************************************
ಅಪ್ಪ ಊರಿನ ಮುಖಂಡರಾಗಿದ್ದರು. ಅವರ ಘನತೆ, ಗಾಂಭೀರ್ಯವೇ ವಿಶಿಷ್ಠವಾಗಿತ್ತು. ನೋಡಿದವರಾರು ನಮಸ್ಕರಿಸದಿರುತ್ತಿರಲಿಲ್ಲ. ಹೆಸರು "ಸೂರ್ಯಪ್ರಕಾಶ್ ಜೋಶಿ". ನಮ್ಮದು ಬಹುಸಂಖ್ಯಾ ಬ್ರಾಹ್ಮಣ ಕುಟುಂಬವಾಗಿತ್ತು. ನಮ್ಮ ತಾಯಿ ಸಾಕ್ಷಾತ್ ಲಕ್ಷ್ಮಿದೇವಿಯಂತೇ ಕಂಗೊಳಿಸುತ್ತಿದ್ದವರು. ಹೆಸರು "ಗಿರಿಜಾ". ಶ್ರೀಮಂತ ಕುಟುಂಬವಾಗಿತ್ತು. ಎಲ್ಲರೂ ಖುಷಿ-ಖುಷಿಯಿಂದ, ಪ್ರತಿದಿನವೂ ಹಬ್ಬದ ವಾತಾವರಣವಿತ್ತು. ಅಮ್ಮನ ಕೈತುತ್ತಿನ ರುಚಿಯಿನ್ನೂ ನೆನಪಿದೆ.
ಎಲ್ಲವೂ ಸರಿಯಾಗಿಯಿತ್ತು, ದೇವರಾಜ್ ಎನ್ನುವ ಧೂರ್ತ ನಮ್ಮ ಬದುಕಲ್ಲಿ ಬರದಿದ್ದರೆ. ಒಂದಿನ ದೇವರಾಜ್ ಎನ್ನುವನೊಬ್ಬ ಹುಡುಗರೊಂದಿಗೆ ಮನೆಗೆ ಬರುತ್ತಾನೆ. ಅವರೆಲ್ಲರೂ, ಅಪ್ಪನ ಜೊತೆ ಜಗುಲಿಯಲ್ಲಿ ಕೂತು ಮಾತನಾಡುತ್ತಿದ್ದರು. ಅದೇನೋ ಜಮೀನಿನ ವಿಷಯವೆಂದಷ್ಟೇ ನೆನಪು. ಸರಿಯಾಗಿ ತಿಳಿದಿಲ್ಲ. ತದನಂತರವೇಕೋ ಅಪ್ಪ ಸಿಟ್ಟಿಗೆದ್ದು "ಬಿಟ್ಟುಕೊಡಲಾಗುವುದಿಲ್ಲವೆಂದರೆ ಆಗೊಲ್ಲವಷ್ಟೇ. ಎದ್ದು ನಡೆಯಿರಿ ಇಲ್ಲಿಂದ" ಅಂತ ಕಟುವಾಗಿ ನುಡಿದಿದ್ದರು. ಸ್ವಲ್ಪ ದಿನದ ನಂತರ "ಬಾರೊ ಮಗನೇ, ತೋಟದಲ್ಲಿ ಸೌತೆಕಾಯಿ ಬಿಟ್ಟಿದ್ಯಾ ನೋಡ್ಕೊಂಡು ಬರೋಣ. ಇವತ್ತು ರಾತ್ರಿ ಸೌತೆಕಾಯಿ ಪಚೌಡಿ ಮಾಡೋಣ" ಅಂತಂದ್ರು. ನಾನೂ ಅವರೊಟ್ಟಿಗೆ ಹೊರಟೆ. ಅದಾಗಲೇ ಸಂಜೆಯ ಹೊತ್ತಾಗಿಬಿಟ್ಟಿತ್ತು. ತೋಟಕ್ಕೆ ಹೋಗಿ ಬೇಗ ಬೇಗ ಸೌತೆಕಾಯಿಗಳನ್ನು ಕಿತ್ತು ಚೀಲ ತುಂಬಿದ್ವಿ. ಒಂದೆರಡು ಸಣ್ಣ ಮಿಡಿಗಳನ್ನು ಅಲ್ಲೇ ಗುಳುಂ ಎನಿಸಿದ್ದೆ. ತುಂಬಾ ರುಚಿಯಾಗಿರುತ್ತಿತ್ತು ಎಳೆಯ ಮಿಡಿಗಳು. ತಿರುಗಿ ನೋಡಿದಾಗ ಮತ್ತದೇ ದೇವರಾಜ್ ಎದುರಿಗೆ ನಿಂತಿದ್ದ. ಅಪ್ಪ ಅವನನ್ನಲ್ಲಿ ನೋಡಿದಾಗಲೇ ತುಂಬಾ ಸಿಟ್ಟಿಗೆದ್ದರು, "ಏನ್ರೀ ಮಾಡ್ತಿದ್ದೀರಾ ನಮ್ಮ ತೋಟದಲ್ಲಿ? ಒಂದ್ಸರ್ತಿ ಹೇಳಿದ್ರೆ ಅರ್ಥವಾಗೊಲ್ವಾ ನಿಮ್ಗೇ. ಹೀಗೇ ಬುದ್ದಿ ಬರಲ್ಲಾ, ಊರ ಜನರೇ ಬುದ್ಧಿ ಕಲಿಸುತ್ತಾರೆ ನಿಲ್ಲಿ" ಎಂದು ಗುಡುಗಿ, ದೇವರಾಜ್ಗೆ ಮಾತನಾಡಲೂ ಅವಕಾಶ ಮಾಡಿಕೊಡದೇ ಊರವರನ್ನು ಕರೆತರಲು ನನ್ನ ಕೈ ಹಿಡಿದೆಳೆದುಕೊಂಡು ತಿರುಗಿ ಮನೆಯ ಕಡೆ ಧಾವಿಸತೊಡಗಿದರು. ಅವರಿಗೆ ಆ ಸಿಟ್ಟಿನಲ್ಲಿ ಅಲ್ಲೇನು ನಡೆಯುತ್ತಿದೆಯೆಂದು ಗ್ರಹಿಸುವ ಅರಿವೇ ಇರಲಿಲ್ಲ.
ಸಲ್ಪ ದೂರದಲ್ಲಿ ಹೊಂಡವೊಂದರ ಮೇಲೆ ನೀಳವಾದ ಬಂದೂಕೊಂದು ನಮ್ಮನ್ನು ಗುರಿಯಾಗಿಟ್ಟಿರುವುದು ಕಂಡಿತು. ತಕ್ಷಣ ನನಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿತ್ತು. ಸುತ್ತಮುತ್ತ ತಿರುಗಿ ನೋಡಿದಾಗ ಇನ್ನೂ ೭-೮ ಜನ ಅವಿತಲ್ಲಿಂದ ಹೊರ ಬರುತ್ತಿರುವುದ ಕಂಡೆ. ತಕ್ಷಣ ಅಪ್ಪನ ಕೈ ಹಿಡಿತದಿಂದ ತಪ್ಪಿಸಿಕೊಂಡು ಅವರನ್ನು ಪಕ್ಕಕ್ಕೆ ತಳ್ಳುವುದಕ್ಕೂ, ಬಂದೂಕು ಠೇಂಕರಿಸುವುದಕ್ಕೂ ಸರಿಹೋಗಿತ್ತು. ಆ ಗುಂಡು ನನ್ನ ತಲೆಯ ಮೇಲೆ ಸವರಿಕೊಂಡು ಹಿಂದೆ ಹಾದುಹೋಯಿತು. ಅಪ್ಪ ಆ ಗುಂಡಿಂದಯೇನೋ ತಪ್ಪಿಸಿಕೊಂಡಿದ್ದರು. ನೋಡುತ್ತಿದ್ದಂತೆಯೇ ನಾನು ನೆಲಕ್ಕುರುಳಿದೆ. ನನ್ನ ತಲೆಯಿಂದ ರಕ್ತ ಬಸಿಯಲು ಶುರುವಾಗಿತ್ತು. ಅಪ್ಪ, "ಪುಟ್ಟೂ..." ಅಂತ ಕಿರುಚಿ ನನ್ನ ಹತ್ತಿರ ಓಡಿ ಬಂದರು. ನಂತರವೆಲ್ಲಾ ಮಂಜು ಮಂಜಾಗಿ ಕಂಡಿತ್ತು. ಸ್ವಲ್ಪ ಹೊತ್ತಲ್ಲಿ ಅಪ್ಪ ಕಿರುಚಿದ್ದು ಕೇಳಿಸಿತು. ಅಪ್ಪ ರಕ್ತದ ಮಡುವಿನಲ್ಲಿ ಮೌನವಾಗಿ ಬಿದ್ದಿದ್ದರು. ಇಬ್ಬರನ್ನೂ ಎಳೆದೊಯ್ಯುತ್ತಿದ್ದರು. ಅಷ್ಟೇ ನೆನಪಿರುವುದು. ಆ ಮೋರಿಯಲ್ಲಿ ಹೇಗೆ ಬಿದ್ದಿದ್ದೆನೋ ಕಾಣೆ. ಓಹೋ.. ಈಗ ಅರ್ಥವಾಗಿತ್ತು. ಅವು ಕನಸುಗಳಲ್ಲ ದುರಂತದ ನೆರಳುಗಳೆಂದು. ಇಷ್ಟು ದಿನ ಹೊರಬರಲು ಕಾಯುತಿತ್ತೇನೋ. ಈಗ ಬೌದ್ಧ ಋಷಿಗಳ ಚಿಕಿತ್ಸೆಯಿಂದ ಎಲ್ಲವೂ ನೆನಪಾಗಿದೆ.
ಅಳತೊಡಗಿದ್ದೆ. ಸಿಟ್ಟಿನ ಜ್ವಾಲೆ ಹತ್ತುರಿದಿತ್ತು. ಆದರೆ ಅಸಹಾಯಕನಾಗಿದ್ದೆ. ತುಂಬಾ ಹೊತ್ತು ಬಿಕ್ಕಿಬಿಕ್ಕಿ ಅಳುತ್ತಲಿದ್ದೆ. ನಂತರ ವಾಸ್ತವದ ಅರಿವಾಗಿ ಸನ್ಯಾಸಿಗಳಿಗೊಂದು ಧನ್ಯವಾದ ಹೇಳಿ ಹೊರಟೆ. ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರು ಬಂದು ಸೇರಿದೆ. ಆ ರಾಕ್ಷಸರಿಂದುಳಿದು ಬಂದದ್ದೇ ದೊಡ್ಡ ವಿಷಯ.
****************************************************************
ಹಳೆಯ ನೆನಪುಗಳಿಂದವಿನ್ನೂ ಹೊರಗೆ ಬಂದಿರಲಿಲ್ಲ. ಅಳಿಯದಂಥಹ ನೆನಪುಗಳೊಡನೆ ತಿಳಿಯದಂಥಹ ಸಾವಿರಾರು ಪ್ರಶ್ನೆಗಳು. ಉತ್ತರವೊಂದಿರಲಿಲ್ಲ. ತಿಂಗಳ ನಂತರ ಹರಿಣಿಯಿಂದ ಕರೆ ಬಂದಿತ್ತು, "ನಿನ್ನನ್ನು ಅಪ್ಪ ನೋಡ್ಬೇಕಂತೆ ಈಗಲೇ ಹೊರಟು ಬಾ" ಅಂತ. ಆಶ್ಚರ್ಯವಾಗಿತ್ತು...!!!. ಅತ್ತಕಡೆ ಹರಿಣಿಯು ನಾನು ಶಾಲೆಯಿಂದ ತಪ್ಪಿಸಿಕೊಂಡಾಗ ಮನೆಯಲ್ಲಿ ತುಂಬಾ ಗಲಾಟೆ ಮಾಡಿದ್ದಳಂತೆ. ಹಾಗೆಯೇ ನಾನಿಲ್ದೇ ಬದುಕೊಲ್ಲ ಮೊದಲು ಆ ರೌಡಿಗಳಿಗೆಲ್ಲಾ ನನಗೇನು ಮಾಡದಂತೆ ಸೂಚಿಸೆಂದು ಗದರಿದ್ದಳಂತೆ. ಅವಳ ತಂದೆಯವ್ರು ಆದಾಗ್ಯೂ ಕೇಳದಿದ್ದಾಗ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ಸೇರಿದ್ದಳು. ಈಗ ಗುಣವಾಗಿ ಪರಿಸ್ಥಿತಿ ಹತೋಟಿಯಲ್ಲಿತ್ತಂತೆ. ಅವ್ರಪ್ಪ ನಮ್ಮಿಬ್ಬರ ಪ್ರೇಮಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ತಿಳಿಸಿದ್ದಳು. ಫೋನಿನಲ್ಲೇ ತರಾಟೆಗೆ ತೆಗೆದುಕೊಂಡೆ, ಯಾಕೆ ಈ ಥರ ಮಾಡಿಕೊಂಡ್ಯೇ ಎಂದು. ಹುಚ್ಚುಡುಗಿ ಅವ್ಳು ಸಿಗ್ಲಿ ಕಪಾಳಕ್ಕೆ ಬಾರಸ್ತೀನಿ ಪಾಪಿ.
ಆಗೋದೆಲ್ಲಾ ಒಳ್ಳೇದಕ್ಕೇ ಬಿಡಿ. ನಮ್ಮಿಬ್ಬರ ಮದುವೆಗೆ ಅವ್ರಪ್ಪ ಒಪ್ಪಿಕೊಂಡ್ರಲ್ಲಾ ಅಷ್ಟೇ ಸಾಕೆಂದು ಮತ್ತೆ ಮಡಿಕೇರಿಯ ಅವರ ಮನೆಗೆ ಹೋದೆ. ಅಲ್ಲಿ ನನ್ನ ಜಿಂಕೆ ಖುಷಿಯಿಂದ ಜಿಗಿಯುತಿದ್ಳು ಕೋತಿ ಮುಂಡೇದು. ಮಗೂ ಥರಹ ಮುದ್ ಮುದ್ದಾಗಿ ಕಾಣ್ತಿದ್ದಳು ಅವತ್ತು. ಬಂದ ತಕ್ಷಣ ಗಟ್ಟಿಯಾಗಿ ತಬ್ಬಿಕೊಂಡು ಬಿಟ್ಟಳು. ಅವ್ರಪ್ಪ ಹೊರಗಡೆ ಹೋಗಿದ್ದರು. ಬರುವ ತನಕ ಹರಿಣಿಯ ತಾಯಿ, ನಾವೆಲ್ಲರೂ ಹರಟೆ ಹೊಡ್ಕೊಂಡು ಕುಳಿತಿದ್ವಿ. ಅವ್ರಿಗೆ ಹರಿಣಿಯೊಬ್ಬಳೇ ಮುದ್ದಿನ ಮಗಳು. ಅಷ್ಟೊತ್ತಿಗೆ ಅವ್ರಪ್ಪ ಬಂದ್ರು. ಹರಿಣಿ ಪರಿಚಯ ಮಾಡಿಸಿದ್ಳು ನಮ್ಮನ್ನ. ನಾನು ದಂಗಾಗಿ, ಮಿಂಚು ಬಡಿದವರ ಹಾಗೇ ನಿಂತುಬಿಟ್ಟಿದ್ದೆ ಅವರನ್ನು ನೋಡಿ. ಇದ್ದಕ್ಕಿದ್ದಂತೆಯೇ ಸಿಟ್ಟು ನೆತ್ತಿಗೇರಿತ್ತು. ಒಡಲಲ್ಲಿ ಜ್ವಾಲೆ ಹೊತ್ತುರಿಯುತ್ತಿತ್ತು. ಆದರೂ ಹತೋಟಿಯಲ್ಲಿಟ್ಟುಕೊಂಡು ಹೇಗೋ ಸಮಾಧಾನದಿಂದ ಒಳ್ಳೆಯ ರೀತಿಯಿಂದಲೇ ಮಾತನಾಡಿದ್ದೆ ಅವತ್ತು. ನಿಶ್ಚಿತಾರ್ಥ, ಮದುವೆಗಳ ಬಗ್ಗೆ ಅವತ್ತೇ ಮಾತನಾಡಿದರು. ಒಪ್ಪಿಗೇ ಸೂಚಿಸಿ ಸಂಭಂಧವನ್ನು ಗಟ್ಟಿಮಾಡಿಕೊಂಡೆ. ನಂತರ ಅರ್ಥಮಾಡಿಕೊಂಡೆ, ಇವರಿಷ್ಟು ಸಂಪತ್ತನ್ನು ಗಳಿಸಿದ್ದು ಸಾವಿರಾರು ಜನರ ತಲೆಯೊಡೆದೆಯೆಂದು.
ಹೌದು.... ದೇವಾನಂದ ಅಲಿಯಾಸ್ "ದೇವರಾಜ್". ಹೆಸರು ಬದಲಿಸಿಕೊಂಡಿದ್ದನಷ್ಟೇ. ಜನರ ಬಾಳಲ್ಲಿ ಆಟವಾಡುತ್ತಾ ಈ ಹಂತಕ್ಕೆ ಬಂದಿದ್ದ. ನನ್ನ ತಂದೆಯವರನ್ನು ಕೊಂದಿದ್ದೂ ಇವನೇ. ಒಡಲ ಸೇಡು ಉರಿದು ಮುಗಿಲ ಮುಟ್ಟಿತ್ತು. ಆಹುತಿ ನೀಡಿ ತಣಿಸದಿದ್ದರೇ ತಂದೆಯವರ ಆತ್ಮಕ್ಕೆ ಶಾಂತಿ ದೊರೆಯುತ್ತಿರಲಿಲ್ಲ. ಅವತ್ತಿನಿಂದಲೇ ಒಂದು ವ್ಯೂಹ ರಚಿಸತೊಡಗಿದೆ. ಅದೊಂದು Master Plan ಆಗಿತ್ತು. ತುಂಬಾ ತಯಾರಿ ನಡೆಸಿಕೊಳ್ಳಬೇಕಿತ್ತು.
ನಂತರವೆಲ್ಲವೂ ಮಾಮೂಲಿಯಂತಿತ್ತು. ನಮ್ಮ ಬಾವೀ ಮಾವನ ದೈನಂದಿನ ರೂಢಿಯೆಲ್ಲದರ ಬಗ್ಗೆ ಇಂಚಿಂಚೂ ಗ್ರಹಿಸಲು ಶುರುಮಾಡಿದೆ. ಹಿಂಬಾಲಿಸಿದೆ. ದಿನವೆಲ್ಲವೂ ತನ್ನ ಸುತ್ತಲೂ ರಕ್ಷಣಾ ಪಹರೆಯೊಂದಿಗೆಯೇ ತಿರುಗುತ್ತಿದ್ದರು, ರಾತ್ರಿ ಹನ್ನೊಂದರ ನಂತರವೊಮ್ಮೆ ಮನೆಯ ಸುತ್ತಮುತ್ತ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸುವ ರೂಢಿಯಿತ್ತು. ರಕ್ಷಣಾ ಸಿಬ್ಬಂದಿಗಳೂ ಇರುತ್ತಿದ್ದರು. ಆದಾಗ್ಯೂ ಆ ಸಮಯದಲ್ಲಿ ಆರಾಮಾಗಿ ಮೂತ್ರ ವಿಸರ್ಜಿಸುವ ಪರಿಪಾಠವಿತ್ತು. ಅದೇನೋ ಗೊತ್ತಿಲ್ಲದೆಯೋ ಏನೋ ರೂಢಿಯಾಗಿಬಿಟ್ಟಿದ್ದಿರಬೇಕು. ಆ ಕಾರ್ಯ ಮಾಡುವಾಗ ಮಾತ್ರ ಸುತ್ತ ಯಾರೂ ಇರುತ್ತಿರಲಿಲ್ಲ. ಈ ಚಿಕ್ಕ ಸಂಗತಿಯನ್ನು ಗ್ರಹಿಸಿದ್ದೆ.
ನನ್ನ ಗೆಳೆಯನೊಬ್ಬ ವೈದ್ಯನಿದ್ದ. ಅವನಿಗೆನೋ ಸುಳ್ಳು ಕಾರಣ ಹೇಳಿ ನನಗೆ Typhoid ಆಗಿದೆಯೆಂದು ಐ.ಸಿ.ಯುದಲ್ಲಿ ಸೇರಿಸಿ, ನಕಲಿ ಚಿಕಿತ್ಸೆ ಮತ್ತು ದಾಖಲೆ ತಯಾರು ಮಾಡಿಕೊಡುವಂತೆ ಕೊನೆಗೂ ಒಪ್ಪಿಸಿದ್ದೆ. ಕೊನೆಗೂ ನನ್ನ ದ್ವೇಷ, ಸೇಡಿಗೆ ರಕ್ತದೌತಣ ಬಡಿಸುವ ಕಾಲ ಬಂದೇಬಿಟ್ಟಿತ್ತು. ಐ.ಸಿ.ಯುದಲ್ಲಿ ದಾಖಲಾಗಿದ್ದೆ. ಹೊರಗಡೆ ಸಿಂಗ್ರಿನ ಕಾವಲಿಗಿರಿಸಿ, ಒಂದು ದಿನವಿಡೀ ಒಳಗ್ಯಾರೂ ಬಾರದಂತೇ ನೋಡಿಕೊಳ್ಳುವಂತೆಯೇ ಹೇಳಿದ್ದೆ. ಅಲ್ಲಿಂದ ಮಡಿಕೇರಿಗೆ ಹೊರಟು ಮಾವನ ಮನೆಯ ಹತ್ತಿರದಲ್ಲೇ ಹೊಂಚು ಹಾಕಿ ಕುಳಿತಿದ್ದೆ. ರಾತ್ರಿ ಹತ್ತು ಘಂಟೆಯಾಗಿತ್ತು. ತವಕಿಸುತ್ತಿದ್ದೆ ಅವನನ್ನು ತಂದೆಯವರ ಬಳಿ ಕಳುಹಿಸಿ ನ್ಯಾಯ ಹೇಳಲು. ಅವಡುಗಚ್ಚಿ ಕುಳಿತಿದ್ದೆ. ಮಿಂಚಿನ ವೇಗ ಅದಾಗಲೇ ನನ್ನ ಮೈಯಲ್ಲಿ ಹೊಕ್ಕಿತ್ತು. ಅಷ್ಟೊತ್ತಿಗೆ ಹೊರಗೆ ಬಂದು ಅವನು ರಕ್ಷಣಾ ಪಹರೆಯೊಂದಿಗೆ ಸುತ್ತುವರಿಯುತ್ತಿದ್ದ.
ಆ ಕತ್ತಲಲ್ಲಿ ಹಾವಿನಂತೆಯೇ ಅಡಗಿ ಸರಸರವೆಂದು ಹಿಂಬಾಲಿಸುತ್ತಲೇ ಇದ್ದೆ, ಯಾರಿಗೂ ತಿಳಿಯದಂತೆ. ಅವನಿಗಾಗಲೇ ಮೂತ್ರಕ್ಕೆ ಅವಸರವಾಗಿತ್ತು. ಪಕ್ಕಕ್ಕೇ ಸ್ವಲ್ಪ ದೂರ ಹೋಗಿ ಮುಂದುವರೆಸುತ್ತಿದ್ದನು.
ತುಂಬಾ ಹಿಂದೆಯೇ ವಿಷಸರ್ಪದ ವಿಷಗಳನ್ನು ಸಂಗ್ರಹಿಸಿದ್ದೆ. ಹಾವು ಕಡಿತದ ಅಧ್ಯಯನ ನಡೆಸಿ ಪಕ್ಕಾ ಹಾವಿನ ಕಡಿತದ ಹಾಗೆಯೇ ತೋರುವ ಒಂದು ಆಯುಧವನ್ನು ತಯಾರಿಸಿದ್ದೆ. ವಿಷ ಹಾಕಿ ಚುಚ್ಚಿದರೆ ಹಾವಿನ ಕಡಿತವಲ್ಲವೆಂದು ಸಾಧಿಸಲು ಯಾರೊಬ್ಬರಿಂದಲೂ ಸಾಧ್ಯವಿರುತ್ತಿರಲಿಲ್ಲ ಅಷ್ಟು ಕರಾರುವಾಕ್ಕಾಗಿತ್ತು. ಸುಮಾರು ಪರೀಕ್ಷೆಗಳ ನಂತರ ಆ ರೂಪದಲ್ಲಿ ತಯಾರಿಸಿದ್ದೆ. ಅದೊಂದು Master Piece ಆಗಿತ್ತು. ಆಯುಧಕ್ಕೆ ವಿಷವನ್ನು ತುಂಬಿಸಿದ್ದೆ. ಸರಿಯಾದ ಸಮಯ ನೋಡಿ ಹಿಂದಿನಿಂದ ಅವನ ಬಾಯಿ ಮುಚ್ಚಿ ಕಾಲಿನ ಮೇಲೆ ಚುಚ್ಚಿದೆ. ಕಿರುಚಲು ಕೂಡಾ ಸಮಯವಿರುವುದಿಲ್ಲ. ಚುಚ್ಚಿ ೩೦ ಸೆಕೆಂಡುಗಳಲ್ಲೇ ಮನುಷ್ಯ ಈ ಜಗದಿಂದ ಖಾಲಿಯಾಗುತ್ತಿದ್ದ. ಅವನ ಕಥೆ ಮುಗಿಸಿದ್ದಾಗಿತ್ತು. ಸಾವನ್ನು ಖಚಿತ ಪಡಿಸಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗಿದ್ದೆ. ವೇಗವಾಗಿ ಅದೇ ರಾತ್ರಿ ವಾಪಸ್ ಬಂದು ಆಸ್ಪತ್ರೆಯಲ್ಲಿ ಸೇರಿಕೊಂಡೆ. ವೈದ್ಯರಿಗೆ ಇನ್ನೊಂದು ದಿನ ಇಟ್ಟುಕೊಂಡು ಕಳಿಸುವಂತೆಯೇ ಕೇಳಿಕೊಂಡೆ. ಎಲ್ಲಾ ನಕಲಿ ದಾಖಲೆಗಳು ತಯಾರಾಗಿತ್ತು.
ಮರುದಿನ ಮಾವನವರು ತೀರಿಕೊಂಡ ಸುದ್ದಿ ಬಂತು. ಪಾಪ... ಹ್ಹಹ್ಹಹ್ಹ. ಆದಷ್ಟು ಬೇಗ ವಾಸಿಯಾಗಿ ಹೋಗಿ ಅವರ ಕಾರ್ಯ ಮುಗಿಸಿದೆ.
ಸತತ ೩೦ ವರ್ಷಗಳ ಕಾಲ ಅದೆಷ್ಟೋ ಜನರ ರಕ್ತದಿಂದ ನಿರ್ಮಿಸಿದ್ದ ದೇವರಾಜನ ಅಭೇದ್ಯ ಕೋಟೆಯನ್ನು ಭೇಧಿಸಿ ನನ್ನ ಕೈವಶಮಾಡಿಕೊಳ್ಳುವ ಎಲ್ಲಾ ಸಂಧರ್ಭವೂ ಬಂದಿತ್ತು. ಸ್ವಲ್ಪ ತಿಂಗಳುಗಳ ನಂತರ ನನಗೂ-ಹರಿಣಿಗೂ ವಿವಾಹವಾಯಿತು. ದೇವರಾಜನ ಆಸ್ತಿಗಳೆಲ್ಲವೂ ನನಗೆ ನಾಮಧೇಯವಾಯಿತು. ಹ್ಹಹ್ಹಹ್ಹ, ಕೋಟಿ-ಕೋಟಿಗಳಿಗೆ ನಾನೊಬ್ಬನೇ ಒಡೆಯನಾಗಿದ್ದೆ. ಯಾರಿಗೆ ಏನು ಸಲ್ಲಬೇಕೆಂದಿತ್ತೋ ಅವುಗಳನ್ನೆಲ್ಲಾ ಸೇರಿಸಿದೆ. ನಮಗೆ ಬೇಕಾದಷ್ಟು ಮಾತ್ರ ನಮ್ಮದಲ್ವಾ.. ಅದಕ್ಕೆಯೇ!!!. ನಂತರ ೨ ವರ್ಷದಲ್ಲಿ ನಮ್ಮ ಹೊಸಾ ಖುಷಿಯ ಉದಯರವಿಯಂತೆಯೇ ಪ್ರೀತಿಯ ಡುಮ್ಮಣ್ಣ ನೀನು ಹುಟ್ಟಿದ್ದೆ. ಹ್ಹಹ್ಹಹ್ಹ. ಕುಚಿ..ಕುಚೀ..."
ಎಂದು "ಚಿರಾಯು" ತನ್ನ ೨ ವರ್ಷದ ಮಗನನ್ನು ಮುದ್ ಮಾಡ್ತಾನೆ.
ಹೌದು....ಹೆಸರು "ಚಿರಾಯು". ನಂತರ ನಾಮಧೇಯಿಸಿಕೊಂಡ ಹೆಸರು "ಜೀವನ್". ಅವನ ಕಥೆಯನ್ನು ಕೇಳುತ್ತಿದ್ದ ಚಿರಾಯುವಿನ ೨ ವರ್ಷದ ಪಾಪು "ರಾಘವ" ಕೇಕೆ ಹಾಕಿ "ಬೀಬೀ.. ಬೂಬು" ಅಂತ ನಗುತ್ತಾ, ಜಿಗಿಯುತ್ತಲಿದ್ದ. ತುಂಬಾ ಮುದ್ದಾದ ಮಗುವದು. ಅದರ ಆಟ ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಅದೇ ಸಮಯಕ್ಕೆ ಅಡುಗೆ ಮನೆಯಿಂದ ಸೌಟು ಹಿಡಿದುಕೊಂಡು ಏನು ಮಾಡ್ತಿದ್ದಾರೆ ಅಪ್ಪ-ಮಗ ಎಂದು ನೊಡೋಕೆ ರೂಮಿಗೆ ಬರ್ತಾಳೆ ಹರಿಣಿ, "ಅಯ್ಯೋ... ಪಾಪುನ ನಿದ್ದೆ ಮಾಡಸ್ರೀ ಅಂದ್ರೇ ಕಥೆ ಹೇಳಿ ಆಟವಾಡಿಸ್ತಿದೀರಲ್ರೀ... ನಿಮ್ಮನ್ನಾ... ನೋಡಿ ಈಗ ಕೋತ್ ನನ್ಮಗ ಹೇಗೆ ನಗ್ತಿದಾನಂತ. ನಿಮ್ಮ ಕಥೆಯಂದ್ರೆ ತುಂಬಾ ಇಷ್ಟವಿರಬೇಕು ಇವ್ನಿಗೆ, ಕೋತಿ ಥರಹ ಅಭಿನಯಿಸೆಲ್ಲಾ ಹೇಳ್ತೀರಲ್ಲಾ ಅದಿಕ್ಕೇ " ಎಂದು ಅವಳೂ ಮುದ್ ಮಾಡ್ತಾಳೆ ಮಗನನ್ನು.
"ಹೌದೂ... ಇಷ್ಟಕ್ಕೂ ಯಾವ ಕಥೆ ಹೇಳಿದ್ರೀ? ಹ್ಞಾ..?"
"ಇನ್ಯಾವ್ದು.. ನಮ್ದೇ... ಪ್ರೇಮ ಕಥೆ"
"ಥೂ.. ಇನ್ನೂ ಚಿಕ್ಕವ್ನು ಕಣ್ರೀ.. ನಿಮ್ ಥರಹ ಪೋಲಿ ಬುದ್ಧಿ ಕಲಿಸ್ಬೇಡಿ ನನ್ಮಗನ್ಗೆ. ಈಗ್ಲೇ ಕಥೆ ಕೇಳಿ ಇಷ್ಟು ನಗ್ತಿದಾನೆ ಪುಂಡಾss.. ಆಮೇಲೆ ಇವ್ನ ಕೃಷ್ಣಾವತಾರಕ್ಕೆ ಮನೆ ಮುಂದೆ ಇವ್ನ girl friends ಸಂಭಾಳಿಸೋಕೆ ನನ್ನತ್ರಾಗಲ್ಲಾಪ್ಪ.. ಹ್ಮ್"
"ಹ್ಹಹ್ಹ.. ಇರ್ಲಿ ಬಿಡೇ ಜಗತ್ತನ್ನೇ ಆಳುವ ಕೃಷ್ಣನ ತರಹ ಬೆಳಸ್ತೀನಿ ಇವ್ನನ್ನ.. ನೋಡ್ತಾ ಇರು"
"ಹ್ಮ್... ಮಾತಿಗೇನು ಕಮ್ಮೀ ಇಲ್ಲ.."
"ಮತ್ಯಾವುದ್ರಲ್ಲಿ ಕಮ್ಮೀ ಇದೀನಿ ಹೇಳು" ಅಂತ ಚಿರಾಯು ಹರಿಣಿಯ ಕಣ್ಣುಗಳನ್ನೇ ನೋಡ್ತಾ ಹತ್ತಿರ ಬರ್ತಾನೆ..
ಇವಳು ನಾಚಿಕೊಳ್ಳುತ್ತಾ,"ಅಯ್ಯೋ.... ಕುಕ್ಕರ್ ೪ ಸೀಟಿ ಹಾಕ್ಬಿಡ್ತು.. ನಿಲ್ರೀ ಬಂದೇ" ಅಂತ ಚಿರಾಯುವನ್ನು ಪಕ್ಕ ತಳ್ಳಿ ಅಡುಗೆ ಮನೆಗೆ ದೌಡಾಯಿಸಿದಳು.
"ಹ್ಹಹ್ಹ... (ನಗುತ್ತಾ ತಿರುಗಿ ರಾಘವನೆಡೆಗೆ) ನಿನ್ನ ಮುದ್ದು ನಗುವನ್ನ ನೋಡಿ ಆಡಿಸಲು ನಿಮ್ಮಜ್ಜ-ಅಜ್ಜಿ ಇದ್ದಿದ್ರೆ ಅದರ ಗಮ್ಮತ್ತೇ ಬೇರೆಯಿರ್ತಿತ್ತು ಕಣೋ. ಮೊಮ್ಮಗನನ್ನು ತಲೆಯ ಮೇಲೆಯೇ ಹೊತ್ತು ತಿರುಗಿಸುತಿದ್ರೇನೋ.. I really miss them both ..ಹ್ಹಹ್ಹ ಏಯ್ ಸುಂದ್ರ ಈ Top Secret ಕಥೆಯನ್ನ ಯಾರತ್ರನೂ ಹೇಳ್ಬೇಡಾ ಓ.ಕೆನಾ. ನಿಮ್ಮಮ್ಮಂಗೂ ಕೂಡಾ" ಎಂದು ರಾಘವನನ್ನು ಮುದ್ದಿಸಿ, ಗಾಳಿಯಲ್ಲಿ ಹಾರಿಸಿ ಹಿಡಿಯುತ್ತಾನೆ ಜೀವನ್.
ಮುಗ್ಧ ಮಗು ಏನೋ ಅರ್ಥವಾದಂತೇ ನಗುತ್ತಲೇ ಇತ್ತು "ಮಾ ಮಾ ಮಾss" ಅಂತ. ನೀವೂ ಅಷ್ಟೇ ಈ ರಹಸ್ಯ ವಿಷಯವನ್ನು ಯಾರಲ್ಲಿಯೂ ಹೇಳಬೇಡಿ.
THE END(ನಿರೀಕ್ಷಿಸಿ.....)Continues…
Written BY:
ರಘುರಾಮ್ ಬಿ. ಜೋಶಿ.