Monday, January 27, 2014

ಅನರ್ಥ ಮಂಥನವು ಪ್ರೀತಿಯ ಕಡಗೋಲಲಿ...




ದೂರದಿಂದದೋ ಬೀಸಿ ಬಂದಿದೆ ಕಡಲಿನಂಥಾ ಪವನವು..
ಭಾವ ಸಾಗರಕಿಳಿಸಿ ನಕ್ಕಿದೀ ಕಾಲವು ಪ್ರೀತಿ ಕಡಗೋಲು ಹಿಡಿದು..
ಮನದ ಭುವಿಯಲಿ ಭೋರ್ಗರೆವಾ ನಾದವೂ..
ಸಿಕ್ಕಿ ಸತ್ತಿಹೆ ಸುಖದ ಜೀವವು ಭಾವದಾ ತಳಹದಿಯಲ್ಲಿ...
ಅತ್ತ ನೆನಪೂ ಇತ್ತ ಕನಸೂ... ಅತ್ತ ನಗುವೂ ಇತ್ತ ನೋವೂ..
ಎಳೆದು ಆಡಲು ಮಗುವಿನಂತೆ ಕಾಲವು.. ಪೋಷಕರಂತೆ ದೈವವು..
ಮಿಂಚಿ ಗುಡುಗಿದೆ ಹೆಪ್ಪುಗಟ್ಟಿದೀ ಕಾರ್ಮೊಡವು.. ರಕ್ಕಸನಂತೆ ಕಗ್ಗತ್ತಲಾಗಿದೀ ಆಗಸವು...
ಒಮ್ಮೆ ಅಶ್ವವು, ಒಮ್ಮೆ ತರುಣಿಯೂ.. ಒಮ್ಮೆ ವಿಷವೂ..
ಕೊನೆಗೂ ಉದ್ಭವಿಸುವುದೊಂದು ಘೋರ ವಿಷವು ಪ್ರೀತಿ ಕಡಗೋಲ ಕಡೆದು ಕಡೆದು.. ಅಮೃತದ ಆಸೆಯಲ್ಲಿ...

ಹೌಹಾರಿದರೇನು ಬಂತು!!.. ತಾಂಡವ ಶಿವನಂತೆ ವಿಷವ ಕುಡಿದುಬಿಡು... ಕುಡಿದು ಸಹಿಸಿಬಿಡು.. ನಕ್ಕು ನಮ್ಮ ಜಗವ ಉಳಿಸಿಬಿಡು...

ಕೊನೆಗೂ ಬರುವುದೊಂದು ಅಮೃತ ಘಳಿಗೆಯೊಂದು ಒಡೆದು ಹಂಚುವುದದು ನಗುತ ಬಾಳಲಿ ಮೊಸದಿ...

ಪ್ರೀತಿಯ ಕಡಗೋಲು  ಸೃಷ್ಟಿಸಿತೇನೆಂಬುದನ್ನೊಮ್ಮೆ ತಿರುಗಿ ನೋಡಿದರಾಗ ಅವಾಂತರವು... ಇದುವೆ ನಿರಂತರವು..
ಮೊದಲು ಕಡಗೋಲ ಹುದುಗಿಸಬೇಕು... ಬೇಡವೀ ವ್ಯರ್ಥ ಮಂಥನವು... ಇದುವೆ ಅನರ್ಥ ಮಂಥನವು ಪ್ರೀತಿಯಾ ಕಡಗೊಲಿದು...

------- ರಘುರಾಮ್ ಜೋಶಿ ---


Friday, January 24, 2014

ಪ್ರೀತಿಯ ಹೂ ಮಾಲೆ..




ಆಸೆಯಿಂದ ಪ್ರೀತಿಯಾ ಹೂಗಳ ಪೊಣಿಸಿ ಮಾಲೆ ಮಾಡಿ ಮುಡಿದಿಹೆ...
ಹಗಲಲಿ ನಗುತಿರಲು ಎನ್ನೊಡನೆ ಇರುಳಿಗೆ ಹೆದರಿ ಬಾಡಿದೆ...
ಹೂಗಳೇ ಬಾಡಿದ ಮೇಲೆ ಆಸೆಗೆಲ್ಲಿಯ ಜೀವವು...
ನೆನಪಿಗೆಂದು ಬಾಡಿದ ಹೂ ಜೊತೆಗಿದ್ದೀತೇ?...
ತಿಪ್ಪೆಯ ಸೇರಿದೆ ಎನ್ನಾಸೆಯಾ ಪ್ರೀತಿಯೊಡನೆ ಮನವ ಹರಿದು...
ಹೊಸ ದಿನವು ಹೊಸ ಹೂಗಳು ಇದುವೆ ಜೀವನ ಚಕ್ರವು.

------ ರಘುರಾಮ್ ಜೋಶಿ---






ಆರದ ಪುಟ್ಟ ಪ್ರೀತಿಯಾ ದೀಪ..




ದೀಪದ ಸುತ್ತ ಕೈ ಹಿಡಿಯುವೆ... ದೀಪವೆ ಸುಟ್ಟರೆ ನ್ಯಾಯವೇ...
ಇದು ಚಳಿಯು.. ಬೀಸಿ ಬರುವಾ ಗಾಳಿಯು.. 
ಉರಿಯಲೇ ಬೇಕು ಎನ್ನ ಪ್ರೀತಿಯ ದೀಪವು.. ನಾ ಹಚ್ಚಿದಾ ದೀಪವು..
ಇತ್ತರೆ ಚಳಿಗೆ ಬೆಚ್ಚನೆಯ ಶಾಖ ಇಲ್ಲದಿರೆ ಕೈ ಸುಟ್ಟ ಗಾಯ..
ಕೈ ಸರಿದರೆ ಪ್ರೀತಿಯಾ ದೀಪ ಆರಿ, ಎನ್ನ ಜಗವು ಕತ್ತಲಾದೀತೆಂಬ ಭಯವು ಸದಾ..
ಸುಟ್ಟರೂ ಅದು ಎನ್ನ ಪ್ರೀತಿಯ, ಪುಟ್ಟ ಬೆಳಕು ತಂದ ದೀಪವು.. ಆರಲು ಬಿಡುವೆನೇ ನಾ.. 
ಸುಟ್ಟರೂ ಆ ನೋವು ಎನಗಿರಲಿ.. ಬೆಳಕು ನಿರಂತರ ಉರಿಯಲಿ... 

--------- ರಘುರಾಮ್ ಜೋಶಿ----------