Tuesday, February 5, 2013

ಒಂದು ನಗುವಿನಾ ಕಥೆ...











ಇಬ್ಬನಿಯಂಥಾ ಕಣ್ಣೀರು..
ಅತ್ತು ಅತ್ತು ಬಿದ್ದಿತೊಂದು ಹೂವಿನಾ ಮೇಲೆ.
ಮುಂಜಾವಿತ್ತು.. ಹೂವು ನಗುವಾಗ ಚಂದವಿತ್ತು.
ಸಿಹಿಯ ಇಬ್ಬನಿಯನು ಕಂಡ ಹೂವು
ಮೊದಲ ಬಾರಿ ಉಪ್ಪಿನಾ ಹನಿಯ ನೋಡಿತ್ತು..

ಹೊಸ ಮಾತುಕತೆ ಶುರುವಾಗಿತ್ತು.
ಹೊಸದೊಂದು ಲೋಕ ನೋಡಿದಂತಾಗಿತ್ತು ಆ ಹೂವಿಗೆ..
ಹೂವು ಅದನ್ನು ಸಿಹಿಯನ್ನಾಗಿಸಲು ಪ್ರಯತ್ನಿಸಿತ್ತು..
ಎಷ್ಟು ಹೇಳಿದರೂ ಆಡಿದರೂ
ಅದು ಕಣ್ಣೀರಲ್ವ... ಅದರ ಉಪ್ಪಿನಾ ಗುಣ ಮರೆವುದೇ..?
ಕೊನೆಗೊಮ್ಮೆ ಆ ಹನಿಯು "ಉಪ್ಪಿನಂತಾ ಪಿಸುಮಾತು" ಹೇಳಿತ್ತು ಆ ಹೂವಿಗೆ.
ಅದು ಎಷ್ಟಾದರೂ ಕಣ್ಣೀರಲ್ಲವೇ ಹ್ಹಾ..
ಆ ಕಣ್ಣೀರು ನೋವಿನ ಭಾವದಿಂದಾದದ್ದಲ್ವ..
       ಭಾರವೆಲ್ಲಾ ಕಳೆದಿತ್ತು..
ಕೊನೆಗೊಮ್ಮೆ ಗಾಳಿಗೆ, ಶಾಖಕ್ಕೆ ಆರಿಹೊಗಿತ್ತು..

ಆದರೆ ಹೂವು ಏಕೋ ಭಾರವಾಗಿತ್ತು ಆ ಮಾತಿನಿಂದ..
ಸಂಜೆಯಾದೊಡೆ ಹೂವಿಗೆಕೋ ಅನಿಸಿತ್ತು..
ಈ ಸೂರ್ಯನ ಮಾಯದಂಥಾ ಬೆಳಕು ಸರಿದ ಮೇಲೆ ಬಣ್ಣವಿಲ್ಲದಾ ಕತ್ತಲಲ್ಲೇನ ನಾ ಮಾಡಲಿ ಎಂದು..
ಯಾರಿಗಾಗಿ ಇರಲೆಂದು ಕೊರಗಿತ್ತು..

ಅಲ್ಲಿ ಬೆಳಕು ಮಾಯವಾಗಿತ್ತು..
ಇಲ್ಲಿ ಅದಾಗಲೇ ಹೂವು ಮುದುಡಿತ್ತು...
ಆ ಕಣ್ಣೀರ ಹನಿ ಅದೆನೆಂದಿತ್ತೋ...?
ಈ ಹೂವು ಅದೇನು ಯೋಚಿಸಿತ್ತೋ..?

ಅವುಗಳು ದೂರವಾದವೇಕೋ ಕಾರಣ ಕಣ್ಮರೆಯಾಗಿತ್ತು..
ನೋವು ಮಾತ್ರ ಮುಗಿಯದಾಗಿತ್ತು..

ಒಟ್ಟಿನಲ್ಲಿ ಕಣ್ಣೀರು ಹೂವನ್ನು ನೊವಿನ ಮನಸ್ಸಿಂದ ಕೊಂದಿತ್ತು.. ತನ್ನನ್ನು ತಾನೇ ಮರೆತು ಕೊಂದುಕೊಂಡಿತ್ತು...
ಅಲ್ಲಿಗೆ ಒಂದು ಕಥೆ ಯಾರಿಗೂ ಕಾಣದಂತೆ, ಕೇಳದಂತೆ ಸಮಾಪ್ತಿಯಾಗಿತ್ತು...

ಮತ್ತದೇ ಸೂರ್ಯ.. ಮತ್ತದೇ ಬೆಳಕು.. ಇನ್ನೊಂದು ಹೂವು..
ಮತ್ತೊಂದು ಕಥೆ.. ಹೀಗೆಯೇ ಮುಗಿಯದಾ ಕವನದ ಭಾವಗಳು..

ಕಾಲಚಕ್ರವಿದು... ಚಕ್ರದಂತೆ ಮತೆ ಮತ್ತೆ ತಿರುಗಿದರೆ ಮಾತ್ರ ಚೆಂದ..
ನಿಂತರೆ ಪಯಣವಾದೀತೇ ಬದುಕು..?
ಗಿಡದಲ್ಲಿ ಹೊಸ ಹೊಸ ಕಥೆ ಮತ್ತೆ ಮತ್ತೆ ಮೂಡುತ್ತವೆ..
ಏನಿದೀ ಕಥೆ..? ಮಗುವಿನಂಥ ಮನದ ಕುತೂಹಲದೊಡನೆ ಕೇಳುತಾ, ನೋಡುತಾ ಸಾಗು ನೀ..

ಒಂದು ದಿನ ಸಂಪೂರ್ಣ ನಿನ್ನದಾಗುತ್ತದೆ...
ಆ ದಿನ ನಗುತಿರು ನೀ ಕೊನೆಯ ಬಾರಿ...

THE END... ..... ಹಃಹ್ಹಹ್ಹ... ಇನ್ನೂ ಇದೆ...


----------- ರಘುರಾಮ್ ಜೋಶಿ ---------------